×
Ad

ಬೆಂಗಳೂರಿನ ಕ್ಸೇವಿಯರ್ ಕ್ಯಾಥೆಡ್ರಲ್‍ನಲ್ಲಿ ಮಾರ್ಚ್ ಫಾರ್ ಲೈಫ್ ಮೆರವಣಿಗೆ

Update: 2025-08-09 23:54 IST

ಬೆಂಗಳೂರು: ಶನಿವಾರದಂದು ಇಲ್ಲಿನ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಕ್ಯಾಥೆಡ್ರಲ್‍ನಲ್ಲಿ 4ನೇ ರಾಷ್ಟ್ರೀಯ ಮಾರ್ಚ್ ಫಾರ್ ಲೈಫ್ ಕಾರ್ಯಕಮ್ರವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೊ, ತ್ರಿಶೂರ್ ನ ಆರ್ಚ್ ಬಿಷಪ್ ಆಂಡ್ರ್ಯೂಸ್ ಥಾಜತ್, ಪಾಂಡಿಚೇರಿಯ ಆರ್ಚ್ ಬಿಷಪ್ ಫ್ರಾನ್ಸಿಸ್ ಕಾಲಿಸ್ಟ್, ಮುಸ್ಲಿಮ್ ಸಮುದಾಯದ ಸೀಮಾ ಮೋಶಿನ್, ಗುರುಸಿಂಗ್ ಸಭಾ ಗುರುದ್ವಾರದ ಮಾಜಿ ಅಧ್ಯಕ್ಷ ಜಸ್ಬೀರ್ ಸಿಂಗ್ ಧೋಡಿ ಉಪದೇಶಗಳನ್ನು ನೀಡಿದರು.

ವಿದ್ಯಾರ್ಥಿಗಳು, ಶಿಕ್ಷಕರು, ಫಾರ್-ಲೈಫ್ ಮತ್ತು ಫ್ಯಾಮಿಲಿ ಮೂವ್‍ಮೆಂಟ್ ಸದಸ್ಯರು, ಪಾದ್ರಿಗಳು, ಕ್ರಿಶ್ಚಿಯನ್ ಪಂಗಡಗಳು ಮತ್ತು ನಂಬಿಕೆ ಸಂಪ್ರದಾಯಗಳ ನಾಯಕರು ಸೇರಿದಂತೆ 2,500ಕ್ಕೂ ಹೆಚ್ಚು ಭಾಗವಹಿಸಿದ್ದರು. ನಗರದ ಬೀದಿಗಳಲ್ಲಿ ಮಾರ್ಚ್ ಫಾರ್ ಲೈಫ್ ಮೆರವಣಿಗೆ ಶಾಂತಿಯುತವಾಗಿ ನಡೆಯಿತು.

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News