×
Ad

ವಿನ್ಯಾಸಕಾರರು ರೇಖಾಚಿತ್ರಗಳ ನೀಲನಕ್ಷೆಯಲ್ಲಿ ಪ್ರಾದೇಶಿಕ ಒಲವು ರೂಢಿಸಿಕೊಳ್ಳಬೇಕು: ಬೆಳ್ಳಿ ಮೇಘನಾಥ ಅಬ್ರಹಾಮ

Update: 2025-08-09 00:00 IST

ಬೆಂಗಳೂರು: ಇಂದು ಫ್ಯಾಶನ್ ಜಗತ್ತು ದಿನೇ ದಿನೇ ವಿಸ್ತಾರಗೊಳ್ಳುತ್ತಿದ್ದು, ಉಡುಪುಗಳ ಯುವ ವಿನ್ಯಾಸಕಾರರಿಗೆ ಹೊಸ ಹೊಸ ಸವಾಲುಗಳು ಎದುರಾಗುತ್ತಿವೆ. ಅವುಗಳನ್ನು ಎದುರಿಸಲು ಯುವ ವಿನ್ಯಾಸಕಾರು ಪ್ರಾಥಮಿಕ ಹಂತದಲ್ಲಿಯೇ ಪ್ರಾದೇಶಿಕ ಒಲವನ್ನು ರೇಖಾ ಚಿತ್ರಗಳ ನೀಲ ನಕ್ಷೆಯಲ್ಲಿ ರೂಢಿಸಿಕೊಳ್ಳಬೇಕು ಎಂದು ಚಿತ್ರ ಕಲಾವಿದ ಬೆಳ್ಳಿ ಮೇಘನಾಥ ಅಬ್ರಹಾಮ ತಿಳಿಸಿದ್ದಾರೆ.

ಯಲಹಂಕಾ ಉಪನಗರದಲ್ಲಿಯ ಸಿ.ಈ.ಎಸ್. ಫ್ಯಾಶನ್ ತಾಂತ್ರಿಕ ವಿದ್ಯಾಲಯದಲ್ಲಿ ಉಡುಪು ವಿನ್ಯಾಸದ ರೇಖಾ ಚಿತ್ರಗಳ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾನವನ ದೈಹಿಕ ರಚನೆಯ ಅಧ್ಯಯನದೊಂದಿಗೆ ಅದರ ವಿನ್ಯಾಸದ ರೇಖಾ ಚಿತ್ರಗಳನ್ನು ಬಿಡಿಸುವ ಮೊದಲು ಉಡುಪುಗಳ ಸಿದ್ಧತೆಯಲ್ಲಿ ಬರುವ ವಿವಿಧ ಅಂಶಗಳನ್ನು ಗಮನಿಸಬೇಕು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಸಿ.ಈ.ಎಸ್. ಫ್ಯಾಶನ್ ತಾಂತ್ರಿಕ ವಿದ್ಯಾಲಯದ ಪ್ರಾಂಶುಪಾಲ ಡಾ.ದೇವೇಂದ್ರನ್, ಪ್ರಾಧ್ಯಾಪಕ ಜ್ಞಾನೇಶ್ವರ, ವ್ಯವಸ್ಥಾಪಕಿ ಶಬಾನಾಜ, ಸಹಾಯಕಿ ಭವ್ಯಾ, ಲಕ್ಷ್ಮಿಪತಿ, ಪ್ರಾರಂಭದಲ್ಲಿ ದೂರದರ್ಶನ ಕೇಂದ್ರದ ಮಾಜಿ ನಿರ್ದೇಶಕÀ ಜಿ.ಎಂ.ಶಿರಹಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News