ಭಾಲ್ಕಿ: ಕುರಿ ಮೇಯಿಸಲು ಹೋದ ಯುವಕ ಕೆರೆಯಲ್ಲಿ ಮುಳುಗಿ ಮೃತ್ಯು
Update: 2025-06-22 14:30 IST
ಬೀದರ್ : ಕುರಿ ಮೇಯಿಸಲು ಹೋದ ಯುವಕ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾಲ್ಕಿ ತಾಲೂಕಿನ ಹಾಲೆ ಹಿಪ್ಪರಗಾ ಗ್ರಾಮದಲ್ಲಿ ಶನಿವಾರ ನಡೆದಿದೆ.
ಪ್ರಶಾಂತ್ (19) ಮೃತಪಟ್ಟ ಯುವಕ. ಕುರಿ ಮೇಯಿಸಲು ಗ್ರಾಮದ ಹತ್ತಿರವಿರುವ ಕೆರೆ ಕಡೆಗೆ ಹೋಗಿದ್ದ ಈತ ಕುರಿಯನ್ನು ತೊಳೆಯಲು ಆತ ಕೆರೆಗೆ ಇಳಿದಿದ್ದ ಸಂದರ್ಭದಲ್ಲಿ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಧನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.