ಮಾನವೀಯ ಮೌಲ್ಯ ಮೈಗೂಡಿಸಿಕೊಳ್ಳದಿದ್ದಲ್ಲಿ ಯಾವ ಪದವಿಗಳಿಸಿದರೂ ವ್ಯರ್ಥ : ಪ್ರೊ.ಜಗನ್ನಾಥ ಹೆಬ್ಬಾಳೆ
ಬೀದರ್ : ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳದಿದ್ದಲ್ಲಿ ಯಾವ ಪದವಿಗಳಿಸಿದರೂ ವ್ಯರ್ಥ ಎಂದು ಬೀದರ್ ವಿಶ್ವವಿದ್ಯಾಲಯದ ನಿವೃತ್ತ ಡೀನ್ ಪ್ರೊ.ಜಗನ್ನಾಥ್ ಹೆಬ್ಬಾಳೆ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ 15ನೇ ತೋಟಗಾರಿಕೆ ಮಹಾವಿದ್ಯಾಲಯ ಮತ್ತು ವಸತಿ ನಿಲಯಗಳ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತೋಟಗಾರಿಕಾ ಪದವಿಯು ಯಾವುದೇ ಪದವಿಗಿಂತ ಕಡಿಮೆ ಇಲ್ಲ. ಇದರಲ್ಲಿ ಅನೇಕ ಉದ್ಯೋಗಾವಕಾಶಗಳಿವೆ. ವಿದ್ಯಾರ್ಥಿಗಳು ತೋಟಗಾರಿಕಾ ಪದವಿಯಲ್ಲಿ ಪಡೆದ ಜ್ಞಾನಾರ್ಜನೆಯು ರೈತರ ಸಹಾಯಕ್ಕಾಗಿ ಸದ್ಭಳಕೆಯಾಗಬೇಕು. ವಿದ್ಯಾರ್ಥಿಗಳು ಜಾಗೃತೆಯಿಂದ ಸರಿಯಾದ ರೀತಿಯಲ್ಲಿ ಅಭ್ಯಾಸ ಮಾಡಿದಾಗ ಯಶಸ್ಸು ಸಾಧ್ಯವಿದೆ. ಪಠ್ಯದ ಜೊತೆಗೆ ಮಾನವೀಯ ಮೌಲ್ಯಗಳ ಕಡೆಗೂ ಗಮನಕೊಡಬೇಕು ಎಂದು ಸಲಹೆ ನೀಡಿದರು.
ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ್ ಅವರು ಮಾತನಾದರು.
ಈ ಸಂದರ್ಭದಲ್ಲಿ ಸಹಾಯಕ ಪ್ರಾಧ್ಯಾಪಕ ಡಾ.ಪ್ರಸನ್ನ ಎಸ್.ಎಮ್, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಮಧು ಸ್ಮೇತಾ, ಪ್ರಧಾನ ಕಾರ್ಯದರ್ಶಿ ದಿವ್ಯಾ, ಕ್ರೀಡಾ ಕಾರ್ಯದರ್ಶಿ ಪಲ್ಲವಿ, ಸಾಂಸ್ಕೃತಿಕ ಕಾರ್ಯದರ್ಶಿ ಸಾಗರ್ ಪಿ., ವಸತಿ ನಿಲಯಗಳ ನಿರ್ವಹಣಾ ಪದಾಧಿಕಾರಿ ನಿತಿನ್ ಗೌಡ, ಪ್ರಧಾನ ಕಾರ್ಯದರ್ಶಿ ಮನೋಜ್ ಪಾಟೀಲ್, ಸಹ ಕಾರ್ಯದರ್ಶಿ ಭಗವಂತರಾಯ್, ಭೋಜನ ಕಾರ್ಯದರ್ಶಿ ಅಲೋಕ್ ಪಾಟೀಲ್, ಕ್ರೀಡಾ ಕಾರ್ಯದರ್ಶಿ ಹರ್ಷ, ಆರೋಗ್ಯ ಕಾರ್ಯದರ್ಶಿ ಆಯುಷ್, ಸಾಂಸ್ಕೃತಿಕ ಕಾರ್ಯದರ್ಶಿ ಸಿಮ್ರಾನ್, ದಿವ್ಯಾ ಉಪ್ಪೆ, ಐಶ್ವರ್ಯ, ಶಿವಬಸಮ್ಮ, ಕೀರ್ತಿ ಹಾಗೂ ರಂಜಿತಾ ಸೇರಿದಂತೆ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.