ಬೀದರ್ | ʼಸರಕಾರ ತಂದ ಸೌಭಾಗ್ಯʼ ಬೀದಿ ನಾಟಕ ಪ್ರದರ್ಶನ
Update: 2025-02-23 17:29 IST
ಬೀದರ್ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರ್ ಇವರು ಆಯೋಜನೆ ಮಾಡಿರುವ ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಗ್ರಹಜ್ಯೋತಿ, ಗ್ರಹಲಕ್ಮಿ, ಅನ್ನಭಾಗ್ಯ, ಶಕ್ತಿಯೋಜನೆ, ಯುವನಿಧಿ ಯೋಜನೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸರಕಾರ ತಂದೆ ಸೌಭಾಗ್ಯ ಎಂಬ ಶೀರ್ಷಿಕೆಯಡಿ ಬೀದಿ ನಾಟಕವನ್ನು ಹುಮನಾಬಾದ ತಾಲ್ಲೂಕಿನ ಕಲ್ಲೂರ ಗ್ರಾಮದಲ್ಲಿ ನಂದೀಶ್ವರ ನಾಟ್ಯ ಸಂಘದ ದೇವದಾಸ ಚಿಮಕೋಡ ಅವರ ಕಲಾ ತಂಡದಿಂದ ಬೀದಿ ನಾಟಕವನ್ನು ಪ್ರದರ್ಶನ ಮಾಡಲಾಯಿತು.
ಈ ಸಂದರ್ಭದಲ್ಲಿ ಕಲಾವಿದರಾದ ವೀರಶೆಟ್ಟಿ ಪಾಂಡುರಂಗ, ಬಕ್ಕಪ್ಪಾ ದಂಡಿನ, ಸಿದ್ದಲಿಂಗ ಸುಣಗಾರ, ಯಲ್ಲಾಲಿಂಗ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.