×
Ad

ಬೀದರ್ | ಬಸವಕಲ್ಯಾಣ ತಹಶೀಲ್ದಾರ್, ಉಪನೋಂದಣಾಧಿಕಾರಿ ವಿರುದ್ಧ ಕ್ರಮಕೈಗೊಳ್ಳಲು ವಕೀಲರ ಸಂಘದಿಂದ ಮನವಿ

Update: 2025-06-05 18:05 IST

ಬೀದರ್ : ಬಸವಕಲ್ಯಾಣ ತಹಶೀಲ್ದಾರ್ ಹಾಗೂ ಉಪನೋಂದಣಾಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಕೀಲರ ಸಂಘದಿಂದ ಬಸವಕಲ್ಯಾಣದ ಸಹಾಯಕ ಆಯುಕ್ತ ಮುಕುಲ್ ಜೈನ್ ಅವರಿಗೆ ಇಂದು ಮನವಿ ಪತ್ರ ಸಲ್ಲಿಸಲಾಯಿತು.

ಮೇ.28 ರಂದು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಕಾಲತ್ತು ಮಾಡಲು ತಹಶೀಲ್ದಾರ್ ಕಚೇರಿಯ ಮುಕ್ತ ನ್ಯಾಯಾಲಯಕ್ಕೆ ಹೋಗಿದ್ದು, ಈ ವೇಳೆ ತಹಶೀಲ್ದಾರ್ ಅವರು, ವಕೀಲರು ಇಲ್ಲಿಗೆ ಬರಬಾರದು ಎಂದು ಹೇಳಿ ನ್ಯಾಯಾಲಯ ಆವರಣದಿಂದ ಹೊರಗಡೆ ಹಾಕಿದ್ದಾರೆ ಎಂದು ವಕೀಲರೊಬ್ಬರು ಆರೋಪಿಸಿದ್ದಾರೆ. ಹಾಗೆಯೇ ಉಪ‌ ನೊಂದಣಾಧಿಕಾರಿ ಪ್ರೇಮಕುಮಾರಿ ರಾಠೋಡ್ ಅವರು ವಕೀಲರು ನಮ್ಮ ಕಚೇರಿಗೆ ಬರಬೇಡಿ ಎಂದು ಹೇಳುತ್ತಿದ್ದಾರೆ. ಇವರಿಬ್ಬರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಭೀಮಾಶಂಕರ್ ಕುರಕೋಟೆ, ಭಾಸ್ಕರ್ ಕಾಂಬಳೆ, ರಾಹುಲ್ ಸೂರ್ಯವಂಶಿ, ವಿವೇಕ್ ನಾಗರಾಳೆ, ಬಸವರಾಜ್ ಪಾರಾ, ಬಿ.ಆರ್.ಕಾಟೆ, ವಿಜಯಕುಮಾರ್ ನಾಟೇಕರ್, ಸಿ.ಕೆ ಹಾರಕೂಡೆ, ಶಿವರಾಜ್ ಮೇತ್ರೆ, ಧರ್ಮಣ್ಣ ಚಾಂದೆ, ಪಂಡಿತ್ ನಾಗರಾಳೆ ಹಾಗೂ ಬಸವರಾಜ್ ಮರ್ಪಳೆ ಸೇರಿದಂತೆ ಇತರ ವಕೀಲರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News