ಬೀದರ್ | ಜಿಲ್ಲೆಯಲ್ಲಿ ಹಣ ದೋಚುವ ತಂಡ ಸಕ್ರಿಯವಾಗಿದ್ದು ಸಾರ್ವಜನಿಕರು ಎಚ್ಚರವಹಿಸಿ : ಎಸ್ಪಿ ಪ್ರದೀಪ್ ಗುಂಟಿ
Update: 2025-06-05 18:17 IST
ಬೀದರ್ : ಜಿಲ್ಲೆಯಲ್ಲಿ ಹಣ ದೋಚುವ ತಂಡ ಒಂದು ಸಕ್ರಿಯವಾಗಿದ್ದು, ಸಾರ್ವಜನಿಕರು ಎಚ್ಚರದಿಂದ ಇರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಅವರ ವಾಹನದಲ್ಲಿ ಇರುವ ಹಣ ದೋಚುವ ತಂಡ ಒಂದು ಸಕ್ರಿಯವಾಗಿದ್ದು, ಸಾರ್ವಜನಿಕರು ಜಾಗೃತರಾಗಿರಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಹಣ ತರುವಾಗ ನಿಮ್ಮನ್ನು ಯಾರಾದರೂ ಹಿಂಬಾಲಿಸುತ್ತಿದ್ದರೆ 112 ನಂಬರಿಗೆ ಅಥವಾ ಬೀದರ್ ನ ಕಂಟ್ರೋಲ್ ರೂಮ್ ನಂಬರ್ 94808 03400ಗೆ ಕರೆ ಮಾಡಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.