ಬೀದರ್ | ವಕ್ಫ್ ತಿದ್ದುಪಡಿ ಕಾಯಿದೆ ಹಿಂಪಡೆಯಲು ಮನವಿ
ಬೀದರ್: 1995 ರ ವಕ್ಫ್ ಕಾಯಿದೆಗೆ ಅಂಗೀಕರಿಸಲಾದ ತಿದ್ದುಪಡಿಗಳು ತಾರತಮ್ಯದಿಂದ ಕೂಡಿದ್ದು, ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತವೆ. ಹೀಗಾಗಿ ಈ ತಿದ್ದುಪಡಿ ಮಾಡಲಾಗಿರುವ ಕಾಯಿದೆಯನ್ನು ಹಿಂಪಡೆಯಬೇಕು ಎಂದು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಮನವಿ ಮಾಡಿದೆ.
ಇಂದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಈ ತಿದ್ದುಪಡಿಯಿಂದ ಸಂವಿಧಾನದ 14, 15, 26 ಮತ್ತು 29 ನೇ ವಿಧಿಯನ್ನು ಉಲ್ಲಂಘಿಸಿದಂತಾಗುತ್ತದೆ. ವಕ್ಫ್ ರಕ್ಷಣೆ ಮತ್ತು ಆಸ್ತಿಗಳಿಗೆ ಲಭ್ಯವಿರುವ ನಿಬಂಧನೆಗಳನ್ನು ಕೊನೆಗೊಳಿಸುವ ಮೂಲಕ ಮುಸ್ಲಿಂ ಸಮುದಾಯದೊಂದಿಗೆ ತಾರತಮ್ಯ ಮಾಡಲಾಗುತ್ತದೆ ಎಂದು ಆರೋಪಿಸಲಾಗಿದೆ.
ಈ ಸಂದರ್ಭದಲ್ಲಿ ಅಬ್ದುಲ್ ಖದೀರ್, ನಿಝಾಮುದ್ದೀನ್, ವಿಠ್ಠಲದಾಸ್ ಪ್ಯಾಗೆ, ಫಾ.ಕ್ಲೇರಿ ಡೀಸೋಜ, ಮೌಲಾನಾ ಅಬ್ದುಲ್ ಗಫರ್, ಮೌಲಾನಾ ಮೋನಿಸ್ ಕಿರ್ಮಾನಿ, ಶಫೀಕ್ ಅಹ್ಮದ್, ಇರ್ಫಾನ್ ಅಹ್ಮದ್, ಸಂತೋಷ್ ಜೋಳದಾಪಗೆ, ಜಫರುಲ್ಲಾ ಖಾನ್, ಮುಜ್ತಬಾ ಖಾನ್, ಮುಹಮ್ಮದ್ ಅಸಿಫುದ್ದೀನ್ ಹಾಗೂ ಮೌಲಾನಾ ಶಕೀಲ್ ಅಹ್ಮದ್ ಸೇರಿದಂತೆ ಇತರರು ಇದ್ದರು.