ಬೀದರ್ | ಬಿ.ಇಡ್ ಪರೀಕ್ಷೆಯಲ್ಲಿ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯಕ್ಕೆ ಶೇ.100 ರಷ್ಟು ಫಲಿತಾಂಶ
Update: 2025-09-04 19:20 IST
ಬೀದರ್ : ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯಕ್ಕೆ ಬಿ.ಇಡ್ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ದೊರಕಿದೆ.
ಬಿ.ಇಡ್ ಪ್ರಥಮ ಸೆಮಿಸ್ಟರ್ ನಲ್ಲಿ ಕಲ್ಪನಾ ಶೇ. 88.2, ಅನುಪಮಾ ಹೊಳ್ಳ ಶೇ. 87.5, ಪ್ರಿಯಾಂಕ ಶೇ.86.8 ಹಾಗೂ ತೃತೀಯ ಸೆಮಿಸ್ಟರ್ ನಲ್ಲಿ ರೋಹಿಣಿ ಶೇ.90.7, ವೈಷ್ಣವಿ ಶೇ.89.2 ಹಾಗೂ ವಿಜಯಲಕ್ಷ್ಮಿ ಶೇ.88.5 ರಷ್ಟು ಅಂಕಗಳಿಸಿದ್ದಾರೆ.
ಆಗಸ್ಟ್ ತಿಂಗಳಲ್ಲಿ ಬೀದರ್ ವಿಶ್ವವಿದ್ಯಾನಿಲಯದಿಂದ ಬಿ.ಇಡ್ ಪ್ರಥಮ ಹಾಗೂ ತೃತೀಯ ಸೆಮಿಸ್ಟರ್ ಪರೀಕ್ಷೆ ಜರುಗಿದ್ದು, ಇಂದು ಅದರ ಫಲಿತಾಂಶ ಪ್ರಕಟವಾಗಿದೆ.
ನಮ್ಮ ಮಹಾವಿದ್ಯಾಲಯದ ಫಲಿತಾಂಶ ಶೇ. 100 ರಷ್ಟು ಬಂದಿದೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.