×
Ad

ಬೀದರ್ | ಆಹಾರ ತಯಾರಿಕೆಯಲ್ಲಿ ಶುಚಿತ್ವ, ನೈರ್ಮಲ್ಯತೆ ಕಾಪಾಡಬೇಕು : ಡಾ.ಸಂತೋಷ್‌

Update: 2025-06-27 18:41 IST

ಬೀದರ್ : ಜಿಲ್ಲೆಯ ಬೀದಿ ಬದಿ ವ್ಯಾಪಾರಿ, ಜುಸ್ ಸೆಂಟರ್, ಚಿಕನ್ ಮತ್ತು ಕಬಾಬ್ ಸೆಂಟರ್, ಟೀ ಅಂಗಡಿ, ಜಿಲೇಬಿ ತಯಾರಕರು, ಚೈನಿಸ್ ಫಾಸ್ಟ್ ಪುಡ್, ಟೀಫಿನ್ ಸೆಂಟರ್, ಚಾರ್ಟ್ ಭಂಡಾರ್ ಹಾಗೂ ಇತರೆ ಆಹಾರ ಪದಾರ್ಥಗಳ ಮಾರಾಟಗಾರರು ಆಹಾರದ ತಯಾರಿಕೆ ಮತ್ತು ವಿತರಣೆಯಲ್ಲಿ ಶುಚಿತ್ವ, ನೈರ್ಮಲ್ಯತೆ ಹಾಗೂ ಗುಣಮಟ್ಟ ಕಾಪಾಡಬೇಕು ಎಂದು ಜಿಲ್ಲಾ ಅಂಕಿತ ಅಧಿಕಾರಿ ಡಾ.ಸಂತೋಷ್‌ ಅವರು ತಿಳಿಸಿದರು.

ಇಂದು ಬೆಂಗಳೂರಿನ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತರ ಆದೇಶದ ಮೇರೆಗೆ ವಿಶೇಷ ಆಂದೋಲನ ಹಮ್ಮಿಕೊಂಡು, ಜಿಲ್ಲೆಯ ಸುಮಾರು 70 ಬೀದಿ ಬದಿ ವ್ಯಾಪಾರಸ್ಥರಿಗೆ ಭೇಟಿ ನೀಡಿ ಅರಿವು ಮೂಡಿಸಿದರು.

ಈ ಸಮಯದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006, ನಿಯಮ 2011ರ ಅನ್ವಯ ಆಹಾರದ ತಯಾರಿಕೆ ಮತ್ತು ವಿತರಣೆಯಲ್ಲಿನ ಶುಚಿತ್ವ, ನೈರ್ಮಲ್ಯತೆ ಹಾಗೂ ಗುಣಮಟ್ಟ ಕುರಿತು ಅರಿವು ಮೂಡಿಸಿದರು.

ತಾಲೂಕು ಮಟ್ಟದಲ್ಲಿ ಶಿಬಿರ ಏರ್ಪಡಿಸುವುದರ ಮುಖಾಂತರ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದಿಂದ ಬೀದಿ ಬದಿ ವ್ಯಾಪಾರಿಗಳಿಗೆ ಉಚಿತವಾಗಿ ನೋಂದಣಿ ಮಾಡಿಸುವುದರ ಬಗ್ಗೆ (ನೋಂದಣಿಗೆ 100 ರೂ. ಪರವಾನಿಗೆಗೆ 2,000 ರೂ. ತಯಾರಕರಿಗೆ 3,000 ರೂ. ಮಾತ್ರ) ತಿಳಿಸಿದ ಅವರು, ಪರವಾನಗಿ ಹಾಗೂ ನೋಂದಣಿ ಮಾಡಿಸಲು ಬ್ರೋಕರ್ ಅಥವಾ ಅಧಿಕಾರಿಗಳನ್ನು ಹಣ ನೀಡದೆ ತಾವೆ ಆನ್ ಲೈನ್‌ ಮುಂಖಾಂತರ ಪಡೆದುಕೋಳ್ಳಿ ಎಂದು ಅವರು ಸಲಹೆ ನೀಡಿದರು.

ಸ್ವಚ್ಛೆತೆಯನ್ನು ಕಾಪಾಡುವುದಕ್ಕಾಗಿ ಅಡುಗೆ ತಯಾರಕರ ವೈದ್ಯಕೀಯ ಪ್ರಮಾಣ ಪತ್ರ, ಡ್ರೆಸ್ ಕೋಡ್, ಹ್ಯಾಂಡ್ ಗ್ಲೋಸ್ ಮತ್ತು ಕ್ಯಾಪ್ ಗಳನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News