ಬೀದರ್ | ರೈಲು ಹಳಿ ಮೇಲೆ ಮೃತದೇಹ ಪತ್ತೆ ; ವಾರಸುದಾರರ ಪತ್ತೆಗಾಗಿ ಮನವಿ
ಬೀದರ್ : ಹುಮನಾಬಾದ್ ಮತ್ತು ಹಳ್ಳಿಖೇಡ (ಕೆ) ಮಧ್ಯದ ರೈಲು ಹಳಿ ಮೇಲೆ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿದ್ದು, ಮೃತ ವ್ಯಕ್ತಿಯ ವಾರಸುದಾರರ ಪತ್ತೆಗಾಗಿ ಬೀದರ್ ರೈಲ್ವೆ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.
ಜ.22 ರ ಬೆಳಿಗ್ಗೆ ಸುಮಾರು 9:40 ಗಂಟೆಗೆ 45 ವಯಸ್ಸಿನ ವ್ಯಕ್ತಿಯ ಮೃತದೇಹವು ರೈಲು ಹಳಿ ಮೇಲೆ ಪತ್ತೆಯಾಗಿದ್ದು, ಇದುವರೆಗೆ ಮೃತನ ವಾರಸುದಾರರು ಯಾರು ಎಂದು ಪತ್ತೆಯಾಗಿಲ್ಲ. ಬೀದರ್ ರೈಲು ನಿಲ್ದಾಣ ಅಧಿಕಾರಿಯ ಲಿಖಿತ ದೂರಿನ ಮೇರೆಗೆ ಬೀದರ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮೃತ ವ್ಯಕ್ತಿಯು 5 ಫೀಟ್ 6 ಇಂಚ್ ಎತ್ತರ ಇದ್ದು, ಅಗಲವಾದ ಹಣೆ, ಸಧೃಡ ಮೈಕಟ್ಟು, ಗೋಧಿ ಮೈ ಬಣ್ಣ, ತಲೆಯಲ್ಲಿ ಕಪ್ಪು ಉದ್ದನೆಯ ಕೂದಲು, ಮುಖದ ಮೇಲೆ ಉದ್ದನೆಯ ಗಡ್ಡ ಮತ್ತು ಮೀಸೆ ಇದೆ. ಆತ ಒಂದು ಕಪ್ಪು ಬಣ್ಣದ ಜಾಕೇಟ್, ಒಂದು ಕಪ್ಪು ಬಣ್ಣದ ಪ್ಯಾಂಟ್, ಬೂದು ಬಣ್ಣದ ರೌಂಡ್ ನೇಕ್ ಟಿ ಶರ್ಟ್ ಧರಿಸಿರುತ್ತಾನೆ ಎಂದು ಮಾಹಿತಿ ನೀಡಿದ್ದಾರೆ.
ಮೃತ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ಅಥವಾ ವಾರಸುದಾರರ ಬಗ್ಗೆ ಯಾರಿಗಾದರು ಮಾಹಿತಿ, ಸುಳಿವು ಸಿಕ್ಕಲ್ಲಿ ಪೊಲೀಸ್ ಉಪ ನಿರೀಕ್ಷಕರು ರೈಲ್ವೆ ಪೊಲೀಸ್ ಠಾಣೆ ಬೀದರ್ ಅಥವಾ ದೂರವಾಣಿ ಸಂಖ್ಯೆ: 08482-226389, ಮೊಬೈಲ್ ಸಂಖ್ಯೆ: 94808 02133, 74830 95508 ಗೆ ಸಂಪರ್ಕಿಸುವಂತೆ ಕೋರಿದ್ದಾರೆ.