×
Ad

ಬೀದರ್ | ಮಾದಕ ವಸ್ತು ಸೇವನೆಯಿಂದ ಮನುಷ್ಯ ದೈಹಿಕ, ಮಾನಸಿಕ ಕಾಯಿಲೆಗೆ ಒಳಗಾಗುತ್ತಾನೆ : ರೇಣುಕಾ ಸ್ವಾಮಿ

Update: 2025-06-26 19:39 IST

ಬೀದರ್ : ಮಾದಕ ವಸ್ತು ಸೇವನೆಯಿಂದ ಮನುಷ್ಯ ದೈಹಿಕ, ಮಾನಸಿಕ ಕಾಯಿಲೆಗೆ ಒಳಗಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾನೆ ಎಂದು ಜಿಲ್ಲಾ ಸಹಾಯಕ ಔಷಧ ನಿಯಂತ್ರಣ ಅಧಿಕಾರಿ ರೇಣುಕಾ ಸ್ವಾಮಿ ಅವರು ತಿಳಿಸಿದರು.

ಇಂದು ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆ, ಕರ್ನಾಟಕ ಎಮ್.ಎಸ್.ಗೋಯಲ್ ಔಷಧ ಮಹಾವಿದ್ಯಾಲಯ ಹಾಗೂ ಕರ್ನಾಟಕ ಸರ್ಕಾರದ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಸಹಾಯಕ ಔಷಧ ನಿಯಂತ್ರಕರ ಇಲಾಖೆ ಅವರ ಸಂಯುಕ್ತಾಶ್ರಯದಲ್ಲಿ ನಡೆದ ಅಂತರರಾಷ್ಟ್ರೀಯ ಮಾದಕ ವಸ್ತು ವಿರೋಧ ದಿನಾಚರಣೆ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.

ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯನು ಆರ್ಥಿಕವಾಗಿ ದೀವಾಳಿಯಾಗುತ್ತಾನೆ. ಇದರಿಂದಾಗಿ ಕುಟುಂಬ ಹಾಗು ಸಮಾಜದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಔಷಧ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹಾಗೂ ಪ್ರಾಧ್ಯಾಪಕ ಡಾ. ವೀರೇಂದ್ರ ಶಾಸ್ತ್ರಿ ಅವರು ಮಾತನಾಡಿದರು.

ಎನ್ಎಸ್ಎಸ್ ಅಧಿಕಾರಿಗಳ ನೇತೃತ್ವದಲ್ಲಿ ಜಾಗೃತಿ ರ‍್ಯಾಲಿಯನ್ನು ಕ.ರಾ.ಶಿ. ಸಂಸ್ಥೆಯ ಕಾಲೇಜು ಆವರಣದಿಂದ ಪ್ರಾರಂಭಿಸಿ ನೂರಾರು ವಿದ್ಯಾರ್ಥಿಗಳು ಘೋಷಣೆಯನ್ನು ಕೂಗುತ್ತಾ, ಮಾದಕ ವಸ್ತುಗಳ ವಿರೋಧ ಕುರಿತು ನಾಮ ಫಲಕಗಳನ್ನು ಹಿಡಿದು ಪ್ರದರ್ಶಿಸುತ್ತಾ ಎಸ್.ಎಸ್. ಮಠ, ಗುಂಪಾ ರಸ್ತೆ ಮುಖಾಂತರವಾಗಿ ಚಿಟ್ಟಾ ಕ್ರಾಸ್ ವೃತ್ತದ ವರೆಗೆ ಹಾಯ್ದು ಸುಮಾರು 2 ಕಿ.ಮೀ ಬೃಹತ್‌ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಕಾಶಿನಾಥ್ ನೌಬಾದೆ, ಡಾ.ಎಮ್.ಎಸ್.ಮಾಲಿಪಾಟೀಲ್, ಡಾ.ರಾಘವೆಂದ್ರ ಪಾಟೀಲ್, ಅಜಯ್ ಪಾಟೀಲ್, ಅಶೋಕ್ ಪಾಟೀಲ್,ಸೂರ್ಯಕಾಂತ್ ದಾನ, ಡಾ.ನೀಲಾವತಿ ಚಿಲ್ಲರ್ಗಿ, ಡಾ.ಅಶ್ವಿನಿ, ಪ್ರೊ.ಯೋಗೇಶ್ವರಿ ಹಾಗೂ ಬೋಧಕ, ಬೋಧಕೆತರ ಸಿಬ್ಬಂದಿ, ಸ್ನಾತಕೋತ್ತರ ಮಹಾವಿದ್ಯಾಲಯದ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News