×
Ad

ಬೀದರ್ | ಎಲ್ಲರೂ ಪರಿಸರ ರಕ್ಷಿಸುವ ಪ್ರಾಮಾಣಿಕ ಕಾಳಜಿ ಹೊಂದಬೇಕು : ನ್ಯಾ.ಪ್ರಕಾಶ್ ಬನಸೋಡೆ

Update: 2025-06-05 21:01 IST

ಬೀದರ್ : ತಾಪಮಾನ ಏರಿಕೆಯ ಈ ಸಂದರ್ಭದಲ್ಲಿ ಎಲ್ಲರೂ ಪರಿಸರವನ್ನು ರಕ್ಷಿಸುವ ಪ್ರಾಮಾಣಿಕ ಕಾಳಜಿ ಹೊಂದಬೇಕಾಗಿದೆ. ಅದರೊಂದಿಗೆ ಸುಂದರ ಸಮಾಜದ ನಿರ್ಮಾಣದಲ್ಲಿ ಈ ನೆಲದ ಕಾನೂನಿನ ಅರಿವು ಹಾಗೂ ಜಾಗೃತಿ ಎಲ್ಲರಿಗೂ ಅವಶ್ಯಕವಾಗಿದೆ ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ್ ಬನಸೋಡೆ ಅವರು ತಿಳಿಸಿದರು.

ಇಂದು ಬೀದರ್ ವಿಶ್ವವಿದ್ಯಾಲಯದಲ್ಲಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಅರಣ್ಯ ಇಲಾಖೆ ಹಾಗೂ ಬೀದರ್‌ನ ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಕೋಶ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ದಿನಮಾನಗಳಲ್ಲಿ ಪರಿಸರ ಮಾಲಿನ್ಯ ಮಿತಿಮೀರಿದೆ. ಬೇಜವಾಬ್ದಾರಿಯ ವಿಲೇವಾರಿಯಿಂದಾಗಿ ಪರಿಸರ ಹಾಳಾಗುತ್ತಿದೆ. ಎಲ್ಲರೂ ಪರಿಸರ ಉಳಿಸಬೇಕಾಗಿದೆ ಎಂದರು.

ಸುಂದರ ಸಮಾಜದ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ಈ ನೆಲದ ಕಾನೂನನ್ನು ಗೌರವಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಪರವಾನಗಿಯಿಲ್ಲದ ವಾಹನ ಚಾಲನೆಯಿಂದ ಅನೇಕ ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ಪ್ರತಿಯೊಬ್ಬರು ವಾಹನ ಚಾಲನೆಯ ಪರವಾನಗಿ, ವಾಹನದ ಮತ್ತು ವ್ಯಕ್ತಿಯ ಜೀವವಿಮೆ ಮಾಡಿಸಬೇಕಾದ ಅಗತ್ಯವಿದೆ. ಪರಿಸರದ ರಕ್ಷಣೆಯೊಂದಿಗೆ ಕಾನೂನಿನ ರಕ್ಷಣೆಯೂ ಸಹ ಗೌರವದಿಂದ ಕಂಡಾಗ ಸುಂದರ,\ಸದೃಢ ದೇಶ ಕಟ್ಟಲು ಸಾಧ್ಯ ಎಂದು ತಿಳಿಸಿದರು.

ಶಿವಶರಣಪ್ಪ ಪಾಟೀಲ್, ಬೀದರ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಎಸ್.ಬಿರಾದಾರ್ ಅವರು ಮಾತನಾಡಿ\ದರು.

ಈ ಸಂದರ್ಭದಲ್ಲಿ ಬೀದರ್ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವೆ ಸುರೇಖಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಷನ್ಮುಖಯ್ಯಾ ಬಿ.ಸ್ವಾಮಿ, ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸಚಿನ್ ಮಲ್ಕಾಪೂರೆ, ಜಿಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಕನಕಟ್ಟಾ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ್ ಜಾಧವ್, ಜೀವ ವೈವಿಧ್ಯ ನಿರ್ವಹಣ ಸಮಿತಿಯ ಸದಸ್ಯ ಡಾ.ಪೃಥ್ವಿರಾಜ್ ಸುದರ್ಶನ್ ಲಕ್ಕಿ, ರಘುನಾಥ್ ರಾಠೋಡ್, ಅರಣ್ಯ ಪಾಲಕ ಸಂಗಮೇಶ್, ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ.ರವೀಂದ್ರನಾಥ್, ಡಾ.ರಾಮಚಂದ್ರ ಗಣಾಪೂರ್ ಹಾಗೂ ವಾಣಿಶ್ರೀ ಸೇರಿದಂತೆ ಬೀದರ್ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಮತ್ತು ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News