ಬೀದರ್ | ಪ್ರತಿಯೊಬ್ಬರು ಒಂದು ಗಿಡ ನೆಡುವ ಪ್ರತಿಜ್ಞೆ ಮಾಡಬೇಕು : ಸೇವಂತಿ ಆರ್ಯ
Update: 2025-06-05 18:12 IST
ಬೀದರ್ : ಪ್ರತಿಯೊಬ್ಬರು ಒಂದು ಗಿಡ ನೆಡುವ ಪ್ರತಿಜ್ಞೆ ಮಾಡಬೇಕು ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ಸೇವಂತಿ ಆರ್ಯ ಅವರು ಹೇಳಿದರು.
ಇಂದು ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಂಚಾಲಿತ ಮಡಿವಾಳೇಶ್ವರ್ ಶಿಶು ಮಂದಿರ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಅವರು ಮಾತನಾಡಿದರು.
ಈ ವೇಳೆ ಹಣಮಂತರಾವ್ ಪಾಟೀಲ್ ಅವರು ಮಾತನಾಡಿ, ಶಬ್ದ ಮಾಲಿನ್ಯ, ಜಲ ಮಾಲಿನ್ಯ ಹಾಗೂ ವಾಯು ಮಾಲಿನ್ಯ ತಡೆಗಟ್ಟುವ ಕೆಲಸ ಮಾಡಬೇಕು. ಪಾನಿ ಬಚಾವ್, ಪೇಡ್ ಲಗಾವ್, ಪ್ಲಾಸ್ಟಿಕ್ ಹಠಾವ್ ಎಂಬ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರೌಢ ಶಾಲೆಯ ಮುಖ್ಯಗುರು ಶರಣು ಪಾಟೀಲ್, ಪ್ರಾಥಮಿಕ ಶಾಲೆಯ ಮುಖ್ಯ ಗುರು ಅರ್ಚನಾ ಶಿರಗಿರೆ, ತ್ರೀಶಾ ಸಿದ್ದೇಶ್ವರ್, ವೈಷ್ಣವಿ ಹಾಗೂ ಶ್ರದ್ಧಾ ಸೇರಿದಂತೆ ಶಾಲೆಯ ಎಲ್ಲಾ ಸಿಬ್ಬಂದಿ ಉಪಸ್ಥಿತರಿದ್ದರು.