×
Ad

ಬೀದರ್‌ | ಕಳ್ಳತನವಾದ ಮೊಬೈಲ್ ಫೋನ್‍ ಬಗ್ಗೆ CEIR ಪೋರ್ಟಲ್‍ನಲ್ಲಿ ದೂರು ದಾಖಲಿಸಿ : ಎಸ್ಪಿ ಪ್ರದೀಪ್ ಗುಂಟಿ

Update: 2025-06-15 19:20 IST

ಬೀದರ್ : ಕಳ್ಳತನವಾದ  ಮೊಬೈಲ್ ಫೋನ್‍ಗಳ ಬಗ್ಗೆ CEIR ಪೋರ್ಟಲ್‍ನಲ್ಲಿ ದೂರು ದಾಖಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕರು ತಮ್ಮ ಮೊಬೈಲ್ ಪೋನ್‍ಗಳು ಕಳ್ಳತನವಾದಲ್ಲಿ ಕೆಎಸ್‍ಪಿ ವೆಬ್‍ಸೈಟ್‍ನಲ್ಲಿ ಕಳ್ಳತನವಾದ ಮೊಬೈಲ್ ಪೋನ್ ಬಗ್ಗೆ ವಿವರವನ್ನು ದಾಖಲಿಸಬೇಕು. ನಂತರ ಕಳೆದುಹೋದ ವಸ್ತು, ದಾಖಲೆಯ ವರದಿ ಕ್ರಮ ಸಂಖ್ಯೆ ಬರುತ್ತದೆ. ಆ ಬಳಿಕ CEIR ಪೋರ್ಟಲ್‍ನಲ್ಲಿ ತಮ್ಮ ಕಳೆದು ಹೋದ ಮೊಬೈಲ್ ಪೋನ್ ವಿವರ ದಾಖಲಿಸಬೇಕು. ಆ ದೂರಿನ ಪ್ರತಿಯನ್ನು ತಮ್ಮ ಸಮೀಪದ ಪೊಲೀಸ್ ಠಾಣೆಗೆ ನೀಡಬೇಕು ಎಂದು ಮಾಹಿತಿ ನೀಡಿದ್ದಾರೆ.

ದೂರಿನ ಪ್ರತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ಸಲ್ಲಿಸಿದ ನಂತರ ಮೊಬೈಲ್ ಫೋನ್‍ಗಳನ್ನು ಪತ್ತೆ ಹಚ್ಚಿ ವಾರಸುದಾರರಿಗೆ ಹಿಂತಿರುಗಿಸಲಾಗುವುದು ಎಂದು ಪ್ರದೀಪ್ ಗುಂಟಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News