ಬೀದರ್ | ಜೂ.9 ರಂದು ಉದ್ಯೋಗ ಮೇಳ
ಬೀದರ್ : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜೂ.9 ರಂದು ಬೆಳಿಗ್ಗೆ 10:30 ರಿಂದ 3 ಗಂಟೆ ವರೆಗೆ ನಗರದಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಉದ್ಯೋಗ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೈಲೂರು ಕ್ರಾಸ್ ರಾಣಿ ಕಿತ್ತೂರು ಚನ್ನಮ್ಮ ಶಾಲೆ ಹತ್ತಿರ, ಗುನ್ನಳ್ಳಿ ಕಾಂಪ್ಲೆಕ್ಸ್ ಪಕ್ಕದಲ್ಲಿ, 1ನೇ ಕ್ರಾಸ್, ವಿದ್ಯಾ ನಗರದಲ್ಲಿರುವ ಬ್ರೈಟ್ ಲೈಫ್ ತರಬೇತಿ ಸಂಸ್ಥೆಯಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಉದ್ಯೋಗ ಮೇಳದಲ್ಲಿ ಖಾಸಗಿ ಕಂಪನಿಗಳು ಭಾಗವಹಿಸುತ್ತಿದ್ದು, ಗ್ರಾಮೀಣ ಅಭ್ಯರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಭಾಗವಹಿಸುವ ಆಸಕ್ತ ಅಭ್ಯರ್ಥಿಗಳು 93536 07634, 79964 24948, 80508 93508 ಈ ನಂಬರಗೆ ಕರೆ ಮಾಡಿ ಪೂರ್ವ ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ದೂರವಾಣಿ ಸಂಖ್ಯೆ: 08482-234682 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.