ಬೀದರ್ | ಮಾ.5 ರಂದು ಉದ್ಯೋಗ ಮೇಳ
ಬೀದರ್ : ನಗರದ ನೌಬಾದ್ ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಮತ್ತು ಮಾಹಿತಿ ಕೇಂದ್ರ ಹಾಗೂ ರಸಾಯನಶಾಸ್ತ್ರ ವಿಭಾಗದ ಸಂಯುಕ್ತಾಶ್ರಯದಲ್ಲಿ ಮಾ.5 ರಂದು ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 9:30 ರಿಂದ 1 ಗಂಟೆವರೆಗೆ ಈ ಉದ್ಯೋಗ ಮೇಳ ಇರಲಿದೆ. ಹೈದ್ರಾಬಾದ್ ನಗರದ ಪಟಂಚೂರಿನಲ್ಲಿರುವ ನ್ಯೂಲಾಂಡ್ ಲಾಬೋರೇಟರಿಸ್ ಕಂಪನಿಯಲ್ಲಿ ಸುಮಾರು 50 ಹುದ್ದೆಗಳಿಗಾಗಿ ಈ ಮೇಳ ಆಯೋಜಿಸಲಾಗಿದೆ. ರಸಾಯನ ಶಾಸ್ತ್ರದಲ್ಲಿ ಪಿಯುಸಿ ಉತ್ತಿರ್ಣ/ಅನುತ್ತಿರ್ಣ ಹಾಗೂ ರಸಾಯನ ಶಾಸ್ತ್ರದಲ್ಲಿ ಬಿ.ಎಸ್ಸಿ, ಎಂ.ಎಸ್ಸಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗದ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.
ಆಸಕ್ತ ಆಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಅಂಕಪಟ್ಟಿಗಳ ಪ್ರತಿಗಳು, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ನಾಲ್ಕು ಭಾವಚಿತ್ರಗಳೊಂದಿಗೆ ಆಗಮಿಸಿ ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ.