×
Ad

ಬೀದರ್ | ಅಪಹರಣಕ್ಕೊಳಗಾದ ಬಾಲಕ ಪತ್ತೆ; ಆರೋಪಿಯ ಬಂಧನ

Update: 2025-06-29 19:46 IST

ಆರೋಪಿ ವಾಸಿಂ ಅಕ್ರಮ್

ಬೀದರ್ : ಅಪಹರಣಕ್ಕೊಳಗಾದ 9 ವರ್ಷದ ಬಾಲಕನನ್ನು ಪೊಲೀಸರು ಕೇವಲ 30 ನಿಮಿಷದಲ್ಲಿ ಪತ್ತೆ ಮಾಡಿ, ಆರೋಪಿಯನ್ನು ಬಂಧಿಸಿದ ಘಟನೆ ಶನಿವಾರ ನಡೆದಿದೆ.

ವಾಸಿಂ ಅಕ್ರಮ್ (20) ಅಪಹರಿಸಿಕೊಂಡು ಹೋದ ಆರೋಪಿ ಎಂದು ಗುರುತಿಸಲಾಗಿದೆ.

ಸಬ್ ಅರ್ಬನ್ ಪೊಲೀಸ್ ಠಾಣಾ ವ್ಯಾಪ್ತಿಯ ಅಗ್ರಹಾರ ಗ್ರಾಮದಲ್ಲಿ ಮಕ್ಕಳು ಆಟ ಆಡುತ್ತಿದ್ದರು. ಈ ಸಮಯದಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯು ದ್ವಿಚಕ್ರ ವಾಹನದ ಮೇಲೆ ಬಂದು 9 ವರ್ಷದ ಹುಡುಗನೊಬ್ಬನನ್ನು ಅಪಹರಿಸಿಕೊಂಡು ಹೋಗಿದ್ದನು.

ಶನಿವಾರ ಬೆಳಿಗ್ಗೆ 10 ಗಂಟೆಗೆ ಶಾಲೆಗೆ ಹೋದ ನನ್ನ ಮಗ ಶಾಲೆ ಬಿಟ್ಟ ನಂತರ ಮನೆಗೆ ಬಂದು, ಆಟ ಆಡಲು ಹೊರಗಡೆ ಹೋಗಿದ್ದನು. ಮಧ್ಯಾಹ್ನ ಸುಮಾರು 1 ಗಂಟೆಗೆ ಅಪರಿಚಿತ ಬೈಕ್ ಸವಾರನೊರ್ವನು ನನ್ನ ಮಗನನ್ನು ಬೈಕ್ ಮೇಲೆ ಹತ್ತಿಸಿಕೊಂಡು ಹೋಗುತ್ತಿರುವುದನ್ನು ಅಲ್ಲಿದ್ದ ಮಕ್ಕಳು ನೋಡಿ ನನಗೆ ತಿಳಿಸಿದ್ದರು. ನಾನು ನನ್ನ ಕುಟುಂಬಸ್ಥರ ಜೊತೆ ಮಗನನ್ನು ಹುಡುಕಲು ಹೊರಟೆವು. ಆಗ ಅಲ್ಲಿದ್ದ ಸ್ಥಳೀಯರು ನನ್ನ ಮಗನನ್ನು ಅಪರಿಚಿತನೊರ್ವನು ಬೈಕ್ ಮೇಲೆ ಹತ್ತಿಸಿಕೊಂಡು ಹೋಗಿರುವುದಾಗಿ ತಿಳಿಸಿದ್ದರು. ಮಗನು ಸಿಗದಿದ್ದಾಗ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದೇವೆ ಎಂದು ಅಪಹರಣಕ್ಕೊಳಗಾದ ಬಾಲಕನ ತಾಯಿ ಇರ್ಫಾನಾ ಬೇಗಂ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News