×
Ad

ಬೀದರ್ | ಮಹಾಡ್ ಸತ್ಯಾಗ್ರಹ ಸ್ವಾಭಿಮಾನ ಹೋರಾಟದ ಸಂಕೇತ : ರವೀಂದ್ರ ಗುರೂಜಿ

Update: 2025-03-20 17:34 IST

ಬೀದರ್ : ಮಹಾಡ್ ಕೆರೆಯ ಸತ್ಯಾಗ್ರಹ ಸ್ವಾಭಿಮಾನ ಹೋರಾಟದ ಸಂಕೇತವಾಗಿದೆ ಎಂದು ಬೌದ್ಧಾಚಾರ್ಯ ರವೀಂದ್ರ ಗುರೂಜಿ ಅವರು ತಿಳಿಸಿದರು.

ಇಂದು ಬಸವಕಲ್ಯಾಣ ತಾಲ್ಲೂಕಿನ ಪ್ರತಾಪೂರ್ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪಂಚ ಕಮಿಟಿ ಹಾಗೂ ಮಾನವ ಬಂಧುತ್ವ ವೇದಿಕೆ ವತಿಯಿಂದ ಚವದಾರ್ ಕೆರೆ ಸತ್ಯಾಗ್ರಹ ಕ್ರಾಂತಿ ದಿನದ ಅಂಗವಾಗಿ ಸಾಮಾಜಿಕ ಸಮಾನತೆಯ ಸಬಲೀಕರಣ ದಿನ ಆಚರಿಸಲಾಯಿತು.

ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಾಗೇಶ್ ಕಾಂಬಳೆ ಮಾತನಾಡಿ, 1927ರ ಡಿ.25ರಂದು ಅಂಬೇಡ್ಕರ್‌ ಅವರು ಮಹಾಡ್‌ ನಲ್ಲಿ 16 ಸಾವಿರ ಜನರನ್ನು ಸೇರಿಸಿ ಚಳವಳಿಗೆ ಮುಂದಾಗುತ್ತಾರೆ. ಇದನ್ನು ತಾಳದೇ ಸವರ್ಣಿಯರು ಮಹಾಡ್‌ ನಲ್ಲಿರುವುದು ಚವದಾರ್‌ ಕೆರೆಯಲ್ಲ ಚೌಧರಿ ಕೆರೆ ಎಂದು ನ್ಯಾಯಾಲಯದಲ್ಲಿ ದಾವೆ ಹೂಡುತ್ತಾರೆ. ಅದು ಖಾಸಗಿ ಕೆರೆ ಎಂದು ಬಿಂಬಿಸಿ ದಲಿತರಿಗೆ ನೀರು ಕುಡಿಯದಂತೆ ಮಾಡುತ್ತಾರೆ. ಮುಂದೆ 1936ರಲ್ಲಿ ಹೈಕೋರ್ಟ್‌ ಅದನ್ನು ಸಾರ್ವಜನಿಕ ಕೆರೆ ಎಂದು ತೀರ್ಪು ನೀಡುತ್ತದೆ. ಆದರೆ, ಸವರ್ಣಿಯರ ವ್ಯವಸ್ಥಿತ ಹುನ್ನಾರ ಹಾಗೂ ಬ್ರಿಟಿಷ್‌ ಸರ್ಕಾರದ ಕುಮ್ಮಕ್ಕಿನ ಕಾರಣ ಆ ಚಳವಳಿಗೆ ಸೋಲಾಗುತ್ತದೆ. ಇಂಥ ಕ್ರಾಂತಿಕಿಡಿ ಹೊತ್ತಿಸಿದ ಚಳವಳಿಯನ್ನು ದಲಿತ ಯುವ ಜನರು ಅಧ್ಯಯನ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಸಮತಾ ಸೈನಿಕ ದಳದ ರಾಜ್ಯ ಸಮಿತಿಯ ದತ್ತಾತ್ರೇಯ ಸೂರ್ಯವಂಶಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆಯ ತಾಲ್ಲೂಕು ಸಂಚಾಲಕ ಪಿಂಟು ಕಾಂಬಳೆ, ಉಪಾಧ್ಯಕ್ಷ ಗೌತಮ್ ಖರ್ಗೆ, ಡಾ.ಬಿ.ಆರ್.ಅಂಬೇಡ್ಕರ್ ಪಂಚ ಕಮಿಟಿ ಅಧ್ಯಕ್ಷ ಶೆಷೆರಾವ್ ಗಾಯಕವಾಡ್, ಉಪಾಧ್ಯಕ್ಷ ಪ್ರಲ್ಹಾದ್ ಕಾಂಬಳೆ, ಕಾರ್ಯದರ್ಶಿ ಭಾವುರಾವ್ ಕಾಂಬಳೆ, ಮನೋಹರ್ ಕಾಂಬಳೆ, ಮುರಹರಿ ಕಾಂಬಳೆ, ರಮೇಶ್ ಕಾಂಬಳೆ, ಬಾಬುರಾವ್ ಕಾಂಬಳೆ, ವಿಲಾಸ್ ಗಾಯಕವಾಡ್, ಪ್ರಕಾಶ್ ಖರ್ಗೆ, ವಿಶ್ವಂಬರ್ ಸೂರ್ಯವಂಶಿ, ದಿಗಂಬರ್ ಸೂರ್ಯವಂಶಿ, ರವಿ ಕಾಂಬಳೆ, ಗೋವಿಂದ್ ಕಾಂಬಳೆ, ಸಂದೇಶ್ ಕಾಂಬಳೆ, ಭಾಗ್ಯವಾನ್ ಗಾಯಕವಾಡ್, ಸುಧಾಕರ್ ಸೂರ್ಯವಂಶಿ, ಯಶವಂತ್ ಸೂರ್ಯವಂಶಿ ಹಾಗೂ ಸಮೃತ್ ಕಾಂಬಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News