ಬೀದರ್ | ಪ್ರಯಾಗರಾಜ್ ಮಹಾ ಕುಂಭಮೇಳಕ್ಕೆ ಹೋಗಿ ವಾಪಸ್ಸು ಬರುವಾಗ ಹೃದಯಾಘಾತದಿಂದ ವ್ಯಕ್ತಿ ಮೃತ್ಯು
Update: 2025-02-13 17:40 IST
ಬೀದರ್ : ಉತ್ತರ ಪ್ರದೇಶದ ಪ್ರಯಾಗರಾಜ್ ನ ಮಹಾ ಕುಂಭಮೇಳಕ್ಕೆ ಹೋಗಿ ವಾಪಸ್ಸು ಬರುವಾಗ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಕಮಲನಗರ್ ತಾಲ್ಲೂಕಿನ ಠಾಣಕುಶನೂರು ಗ್ರಾಮದ ನಿವಾಸಿ ಕಂಟೆಪ್ಪಾ ಜಿರ್ಗೆ (65) ಮೃತಪಟ್ಟ ವ್ಯಕ್ತಿ ಎಂದು ತಿಳಿದುಬಂದಿದೆ.
ಕಂಟೆಪ್ಪಾ ಜಿರ್ಗೆ ಅವರು ಪ್ರಯಾಗರಾಜ್ ಮಹಾ ಕುಂಭಮೇಳಕ್ಕೆ ಹೋಗಿ ವಾಪಸ್ ಬರುತ್ತಿದ್ದಾಗ ಉತ್ತರ ಪ್ರದೇಶದ ಕಾಶಿಯಲ್ಲಿ ಬುಧವಾರ ಸುಮಾರು 11 ಗಂಟೆಗೆ ಹೃದಯಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಧರ್ಮಪತ್ನಿ, ಮೂರು ಜನ ಅಣ್ಣಂದಿರು, ಓರ್ವ ತಮ್ಮ, ಮೂವರು ಅಕ್ಕಂದಿರು, ನಾಲ್ಕು ಹೆಣ್ಣುಮಕ್ಕಳು ಹಾಗೂ ಓರ್ವ ಗಂಡು ಮಗ ಸಮೇತ ಅಪಾರ ಬಳಗವನ್ನು ಅಗಲಿದ್ದಾರೆ.