ಬೀದರ್ | ವ್ಯಕ್ತಿ ಕಾಣೆ : ಪತ್ತೆಗಾಗಿ ಮನವಿ
ಬೀದರ್ : ಬೇಕರಿ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋದವನು ಮರಳಿ ಬಾರದೆ ಕಾಣೆಯಾದ ಘಟನೆ ಜ.1ರಂದು ನಡೆದಿದೆ ಎಂದು ನಗರದ ಮಾರ್ಕೆಟ್ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದ ಅಬ್ದುಲ ಫೈಜದರ್ಗಾದ ನಿವಾಸಿ ಅಬ್ದುಲ್ ಹಬೀಬ್ (46) ಕಾಣೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ.
ಅಬ್ದುಲ್ ಹಬೀಬ್ 5 ಅಡಿ 6 ಇಂಚ್ ಎತ್ತರ ಇದ್ದು, ದುಂಡು ಮುಖ, ಕೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಮನೆಯಿಂದ ಹೋಗುವಾಗ ಮೈ ಮೇಲೆ ಬೂದಿ ಬಣ್ಣದ ಶರ್ಟ್, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಹಾಗೂ ಕಪ್ಪು ಬಣ್ಣದ ಮಂಕಿ ಕ್ಯಾಪ್ ಧರಿಸಿದ್ದನು. ಈತ ಉರ್ದು, ಹಿಂದಿ ಹಾಗೂ ಕನ್ನಡ ಭಾಷೆ ಮಾತನಾಡುತ್ತಾನೆ ಎಂದು ಮಾಹಿತಿ ನೀಡಿದ್ದಾರೆ.
ಕಾಣೆಯಾದ ವ್ಯಕ್ತಿಯ ಬಗ್ಗೆ ಸಾರ್ವಜನಿಕರಿಗೆ ಯಾವುದಾದರು ಮಾಹಿತಿ ಸಿಕ್ಕರೆ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: 94808 03400, ಪೊಲೀಸ್ ಉಪಾಧೀಕ್ಷಕರು ಕಛೇರಿಯ ದೂರವಾಣಿ ಸಂಖ್ಯೆ: 08482-226705, ಮಾರ್ಕೆಟ್ ವೃತ್ತ ಪೊಲೀಸ್ ನಿರೀಕ್ಷಕರ ಕಛೇರಿಯ ದೂರವಾಣಿ ಸಂಖ್ಯೆ: 94808 03431, ಮಾರ್ಕೆಟ್ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08482-226709, 94808 03447 ಗೆ ಸಂಪರ್ಕಿಸುವಂತೆ ಕೋರಿದ್ದಾರೆ.