×
Ad

ಬೀದರ್ | ವ್ಯಕ್ತಿ ಕಾಣೆ : ಪತ್ತೆಗಾಗಿ ಮನವಿ

Update: 2025-05-20 18:39 IST

ಬೀದರ್ : ಬಸವಕಲ್ಯಾಣ ತಾಲ್ಲೂಕಿನ ಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ತೋಟಗಾರಿಕೆಯಲ್ಲಿ ಮಾವಿನ ತೋಟ ಕಾಯುವ ಕೆಲಸ ಮಾಡುವ ಸ್ಥಳದಿಂದ ವ್ಯಕ್ತಿಯೊಬ್ಬರು ಎ.24 ರಂದು ಕಾಣೆಯಾಗಿದ್ದು, ಸಾರ್ವಜನಿಕರಿಗೆ ಸುಳಿವು ಸಿಕ್ಕಲ್ಲಿ ಮಾಹಿತಿ ನೀಡಬೇಕು ಎಂದು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

ಜಹಿರಾಬಾದ್ ತಾಲ್ಲೂಕಿನ ಕೋಹಿರ ಗ್ರಾಮದ ನಿವಾಸಿ ಆಫಸರ್ ಅಬ್ದುಲ್ ಖಯಿಮ್ (55) ಕಾಣೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಕಾಣೆಯಾದ ವ್ಯಕ್ತಿಯು 5.2 ಅಡಿ ಎತ್ತರ ಇದ್ದು, ನೋಡಲು ಗೋಧಿ ಮೈಬಣ್ಣ ಕಪ್ಪು ಬಿಳಿ ಮಿಶ್ರಿತ ಕೂದಲು, ಕಪ್ಪು ಬಣ್ಣದ ಪ್ಯಾಂಟ, ಚೆಕ್ಸ್ ಶರ್ಟ್ ಧರಿಸಿರುವ ಈತ ಹಿಂದಿ ಹಾಗೂ ತೆಲಗು ಭಾಷೆ ಮಾತನಾಡುತ್ತಾನೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಮಂಠಾಳ ಪೊಲೀಸ್ ಠಾಣೆಯ ಸಿಪಿಐ ಅವರ ಮೊಬೈಲ್ : 98447 82021, ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಅವರ ಮೊಬೈಲ್ : 94808 03460 ಗೆ ಸಂಪರ್ಕಿಸಲು ಅವರು ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News