ಬೀದರ್ | ಮಹಾ ಕುಂಭಮೇಳಕ್ಕೆ ಸಾಗಲು ವಿಶೇಷ ರೈಲಿಗೆ ಚಾಲನೆ ನೀಡಿದ ಸಂಸದ ಸಾಗರ್ ಖಂಡ್ರೆ
Update: 2025-02-14 17:59 IST
ಬೀದರ್ : ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಯಾತ್ರಾರ್ಥಿಗಳು ಸಾಗಲು ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದ್ದು, ಇಂದು ಸಂಸದ ಸಾಗರ್ ಖಂಡ್ರೆ ಅವರು ಚಾಲನೆ ನೀಡಿದರು.
ಇಂದು ನಗರದ ರೈಲ್ವೆ ನಿಲ್ದಾಣದಲ್ಲಿ ವಿಶೇಷ ರೈಲಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ ಅವರು, ಕುಂಭಮೇಳಕ್ಕೆ ಹೋದ ಎಲ್ಲ ಯಾತ್ರಾರ್ಥಿಗಳ ಪ್ರಯಾಣ ಸುಖಕರವಾಗಿರಲಿ. ಅವರೆಲ್ಲರೂ ಒಳ್ಳೆ ರೀತಿಯಿಂದ ಆಶೀರ್ವಾದ ಪಡೆದುಕೊಂಡು ಬರಲಿ ಎಂದು ಶುಭ ಹಾರೈಸಿದರು.
ಪ್ರಯಾಗರಾಜ್ ಮಹಾಕುಂಭ ಮೇಳಕ್ಕೆ ತೆರಳುವ ಭಕ್ತಾದಿಗಳ ಅನುಕೂಲಕ್ಕಾಗಿ ವಿಶೇಷ ರೈಲು ಸೇವೆ ಒದಗಿಸಬೇಕು ಎಂದು ಸಾಗರ ಖಂಡ್ರೆ ಅವರು, ಕೇಂದ್ರ ಸಚಿವರಿಗೆ ಮನವಿ ಮಾಡಿದ್ದರು. ಇವರ ಮನವಿಗೆ ಸ್ಪಂದನೆ ಸಿಕ್ಕಿದ್ದು, ಇಂದು ವಿಶೇಷ ರೈಲಿಗೆ ಚಾಲನೆ ನೀಡಲಾಯಿತು.