×
Ad

ಬೀದರ್ | ಆಸ್ತಿ ವಿವರ ಸಲ್ಲಿಸಲು ಪುರಸಭೆ ಮುಖ್ಯಾಧಿಕಾರಿ ಸೂಚನೆ

Update: 2025-02-18 18:08 IST

ಬೀದರ್ : ಹಳ್ಳಿಖೇಡ (ಬಿ) ಪುರಸಭೆ ವ್ಯಾಪ್ತಿಯ ಎಲ್ಲಾ ಆಸ್ತಿ ಮಾಲಕರು ಈಗಾಗಲೇ ಗಣಕೀಕರಣಗೊಳಿಸಿರುವ ತಮ್ಮ ಆಸ್ತಿಗಳ ವಿವರ ಪರಿಶೀಲಿಸಿಕೊಂಡು ಯಾವುದೇ ತಿದ್ದುಪಡಿ ಅಥವಾ ಬದಲಾವಣೆಗಳು ಇದ್ದಲ್ಲಿ ಫೆಬ್ರವರಿ ತಿಂಗಳ ಒಳಗಾಗಿ ಅಗತ್ಯ ಮಾಹಿತಿ ಸಲ್ಲಿಸುವಂತೆ ಪುರಸಭೆ ಮುಖ್ಯಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರ ಸುತ್ತೋಲೆಯಂತೆ, ತಂತ್ರಾಂಶ ಸರಳೀಕರಣಗೊಳಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದಾಗಿ ಆಸ್ತಿ ಕಣಜ ತಂತ್ರಾಂಶದಲ್ಲಿ ಗಣಕೀಕರಣಗೊಂಡ ಆಸ್ತಿ ವಿವರ ಪರಿಶೀಲನೆಗೆ ಒಳಪಡಿಸಿ ಇ-ಆಸ್ತಿ ತಂತ್ರಾಂಶದಲ್ಲಿ ಸ್ವತ್ತುಗಳಿಗೆ ಸಂಬಂಧಪಟ್ಟ ಅಗತ್ಯ ದಾಖಲೆ ಸಲ್ಲಿಸಬೇಕು ಎಂದು ಅವರು ಹೇಳಿದ್ದಾರೆ.

ಸ್ವತ್ತಿನ ಮಾಲಕತ್ವವನ್ನು ದೃಢೀಕರಿಸುವ ಕ್ರಯ, ದಾನ, ಹಕ್ಕು ನಿವೃತ್ತಿ, ಹಕ್ಕು ಪತ್ರ, ವಿಭಾಗ ಪತ್ರ ಸ್ವತ್ತಿನ ಪೋಟೋ, ಮಾಲೀಕರ ಭಾವಚಿತ್ರ, ಮಾಲೀಕರ ಮತದಾರರ ಗುರುತಿನ ಚೀಟಿ, ಆಧಾರಕಾರ್ಡ್, ಪ್ಯಾನ್‍ಕಾರ್ಡ್, ಕಂದಾಯ ಪಾವತಿಸಿರುವ ರಶೀದಿ, ವಿದ್ಯುತ್ ಬಿಲ್ ಹಾಗೂ ನೀರಿನ ಬಿಲ್ ಸೇರಿದಂತೆ ಇತ್ಯಾದಿ ದಾಖಲಾತಿಗಳು ಹಳ್ಳಿಖೇಡ (ಬಿ) ಪುರಸಭೆ ಕಛೇರಿಗೆ ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News