ಬೀದರ್ | ಪ್ರಯಾಗರಾಜ್ ಅಪಘಾತ ಪ್ರಕರಣ ; ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಚಿವ ರಹೀಂ ಖಾನ್
ಬೀದರ್ : ಉತ್ತರ ಪ್ರದೇಶದ ಪ್ರಯಾಗರಾಜ್ ಗೆ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಅಪಘಾತ ಸಂಭವಿಸಿ ಗಾಯಗೊಂಡಿದ್ದ, ಗಾಯಾಳುಗಳನ್ನು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಅವರು ಬ್ರಿಮ್ಸ್ ಆಸ್ಪತ್ರೆಗೆ ಭೇಟಿ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕುಂಭಮೇಳಕ್ಕೆ ಹೋಗಿ ಬರುವಾಗ ಅಪಘಾತ ಸಂಭವಿಸಿ ಲಾಡಗೇರಿ ನಿವಾಸಿಗಳು ಮೃತಪಟ್ಟಿದ್ದರು. ಆ ಮೃತ ಕುಟುಂಬಕ್ಕೆ ಸಾಂತ್ವನ ಹೇಳಿ ಬಂದಿದ್ದೇನೆ. ಈಗ ಅಪಘಾತದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಲು ಇಲ್ಲಿಗೆ ಬಂದಿದ್ದೇನೆ. ಕೆಲವೊಬ್ಬರ ಕಾಲು ಮುರಿದಿದೆ, ಇನ್ನು ಕೆಲವೊಬ್ಬರಿಗೆ ದೇಹದ ಅನೇಕ ಕಡೆ ಗಾಯಗಳಾಗಿವೆ. ಇವಾಗ ಎಲ್ಲರ ಸ್ಥಿತಿಗತಿ ಸ್ಥಿರವಾಗಿದೆ ಎಂದರು.
ಒಳ್ಳೆಯ ರೀತಿಯ ಚಿಕಿತ್ಸೆ ನೀಡುವುದಕ್ಕಾಗಿ ವೈದ್ಯರಿಗೆ ಸೂಚನೆ ನೀಡಿದ ಅವರು, ಸರಕಾರ ಅವರ ಜೊತೆಗೆ ಇದೆ. ಏನೇ ಸಮಸ್ಯೆ ಇದ್ದರೂ ನಾವೆಲ್ಲರೂ ಅವರ ಜೊತೆಗೆ ಇದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ್ ಅರಳಿ ಹಾಗೂ ವೈದ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.