ಬೀದರ್ | ಆಸ್ತಿವಿವಾದ : ಚಾಕು ಇರಿದು ವ್ಯಕ್ತಿಯ ಹತ್ಯೆ
Update: 2025-02-23 11:30 IST
ಮೃತ ವ್ಯಕ್ತಿ
ಬೀದರ್ : ಜಮೀನಿನ ವಿವಾದದಿಂದಾಗಿ ಸಹೋದರ ಸಂಬಂಧಿಗಳ ನಡುವಿನ ಗಲಾಟೆಯಲ್ಲಿ ವ್ಯಕ್ತಿಯೊರ್ವ ಮೃತಪಟ್ಟಿರುವ ಘಟನೆ ಔರಾದ ತಾಲ್ಲೂಕಿನಲ್ಲಿ ನಡೆದಿದೆ.
ಕೊಳ್ಳೂರ ಗ್ರಾಮದ ನಿವಾಸಿ ಗುರಯ್ಯ ಬಂಡಯ್ಯ ಸ್ವಾಮಿ (37) ಮೃತಪಟ್ಟ ವ್ಯಕ್ತಿ ಎಂದು ತಿಳಿದುಬಂದಿದೆ.
ಶನಿವಾರ ಸಾಯಂಕಾಲ ಆಸ್ತಿ ವಿಚಾರವಾಗಿ ಸಹೋದರ ಸಂಬಂಧಿಗಳ ಮದ್ಯೆ ವಿವಾದ ಉಂಟಾಗಿ ಗುರಯ್ಯ ಬಂಡಯ್ಯ ಸ್ವಾಮಿ ಅವರಿಗೆ ಚಾಕುವಿನಿಂದ ಇರಿತದಿದ್ದು, ತೀವ್ರ ರಕ್ತಸ್ರಾವ ಉಂಟಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಕಲ್ಲಯ್ಯ ಸ್ವಾಮಿ ಹಾಗೂ ವಿಜಯಕುಮಾರ್ ಅವರ ವಿರುದ್ಧ ಚಿಂತಾಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.