ಬೀದರ್ | ಆಷಾಢ ಏಕಾದಶಿ ಪ್ರಯುಕ್ತ ಪಂಢರಪುರಕ್ಕೆ ವಿಶೇಷ ರೈಲು
Update: 2025-06-28 21:14 IST
ಸಾಂದರ್ಭಿಕ ಚಿತ್ರ
ಬೀದರ್ : ಪ್ರತಿ ವರ್ಷದಂತೆ ಈ ವರ್ಷವೂ ಆಷಾಢ ಏಕಾದಶಿ ನಿಮಿತ್ತವಾಗಿ ಜು.5 ರಂದು ಬೀದರ್ ನಿಂದ ಪಂಢರಪುರಕ್ಕೆ ವಿಶೇಷ ರೈಲು ಕಲ್ಪಿಸಲಾಗಿದೆ.
ಆಷಾಢ ಏಕಾದಶಿ ದಿನದಂದು ಮಹಾರಾಷ್ಟ್ರದ ಪಂಢರಪುರದಲ್ಲಿರುವ ವಿಠ್ಠಲ್ ರುಕ್ಮಿಣಿ ದೇವಸ್ಥಾನಕ್ಕೆ ಹೋಗಲಿರುವ ಭಕ್ತಾದಿಗಳ ಪ್ರಯಾಣಕ್ಕಾಗಿ ಈ ವಿಶೇಷ ರೈಲು ಒದಗಿಸಲಾಗಿದೆ.
ಈ ವಿಶೇಷ ರೈಲು ಜು.5 ರಂದು ಭಾಲ್ಕಿ ರೈಲು ನಿಲ್ದಾಣಕ್ಕೆ ರಾತ್ರಿ 9:15 ಗಂಟೆಗೆ ಬಂದು 9:17 ಗಂಟೆಗೆ ಪ್ರಯಾಣ ಮುಂದುವರಿಸಲಿದೆ. ನಂತರದಲ್ಲಿ ಬೀದರ್ ನಿಲ್ದಾಣಕ್ಕೆ ರಾತ್ರಿ 9:50 ಗಂಟೆಗೆ ತಲುಪಿ 9:52 ಗಂಟೆಗೆ ಹೊರಡಲಿದೆ. ಈ ರೈಲು ಪಂಢರಪುರಕ್ಕೆ ಜು.6 ರಂದು ಬೆಳಿಗ್ಗೆ 8:15 ಗಂಟೆಗೆ ತಲುಪಲಿದೆ ಎಂದು ತಿಳಿದು ಬಂದಿದೆ.
ಭಕ್ತರು ಈ ರೈಲಿನ ಸದುಪಯೋಗ ಪಡೆದುಕೊಳ್ಳುವಂತೆ ಸಂಸದ ಸಾಗರ್ ಖಂಡ್ರೆ ಅವರು ಕೋರಿದ್ದಾರೆ.