×
Ad

ಬೀದರ್ | ತಹಶೀಲ್ದಾರ್ ಅವರ ಡಿಜಿಟಲ್ ಸಹಿ ನಕಲಿಸಿ ಜಮೀನು ವರ್ಗಾವಣೆ

Update: 2025-06-20 19:59 IST

ಬೀದರ್ : ಬೀದರ್ ತಹಶೀಲ್ದಾರ್ ದಿಲ್‌ಶಾದ್‌ ಅಲಿ ಮಹತ್ ಅವರ ಡಿಜಿಟಲ್ ಸಹಿ ನಕಲಿ ಮಾಡಿ ಒಬ್ಬರ ಹೆಸರಲ್ಲಿ ಇದ್ದ ಜಮೀನಿನ ಪಹಣಿ ಇನ್ನೊಬ್ಬರ ಹೆಸರಿಗೆ ವರ್ಗಾವಣೆ ಮಾಡಿದ ಘಟನೆ ನಡೆದಿದೆ.

ಬೀದರ್ ತಾಲೂಕಿನ ನಂದಗಾಂವ್ ಗ್ರಾಮದ ಜಗನ್ನಾಥ್ ಎಂಬುವವರ ಹೆಸರಿನಲ್ಲಿದ್ದ 8 ಎಕರೆ 13 ಗುಂಟೆ ಜಮೀನು ಮುಹಮ್ಮದ್ ಇಸ್ಮಾಯಿಲ್ ಎಂಬುವವರಿಗೆ ವರ್ಗಾವಣೆಯಾಗಿದೆ.

ನಾವು ನಮ್ಮ ಜಮೀನು ಮಾರಾಟ ಮಾಡಲಿಲ್ಲ. ಸರ್ವೆ ನಂ.24/6ರಲ್ಲಿ ಒಟ್ಟು 12 ಎಕರೆ 21 ಗುಂಟೆ ಜಮೀನು ಇದೆ. ಇದರಲ್ಲಿ ಮುಹಮ್ಮದ್ ಇಸ್ಮಾಯಿಲ್‌ ತಂದೆ ಅಬ್ದುಲ್ ರಜಾಕ್ ಹೆಸರಿನಲ್ಲಿ 4 ಎಕರೆ 8 ಗುಂಟೆ ಇದೆ. ಉಳಿದ 8 ಎಕರೆ 13 ಗುಂಟೆ ಜಮೀನು ನಮ್ಮ ತಂದೆಯವರಾದ ಜಗನ್ನಾಥ್ ಅವರ ಹೆಸರಲ್ಲಿ ಇದೆ. ಆದರೆ ಜೂ.12 ರಂದು ತಹಶೀಲ್ದಾರ್ ಅವರ ಸಹಿಯನ್ನು ನಕಲಿ ಮಾಡಿ ನಮ್ಮ ಅಪ್ಪನ ಹೆಸರಲ್ಲಿದ್ದ ಜಮೀನು ಕೂಡ ಮುಹಮ್ಮದ್ ಇಸ್ಮಾಯಿಲ್‌ ಅವರ ಹೆಸರಿಗೆ ಸೇರಿಸಲಾಗಿದೆ ಎಂದು ಸುನೀಲ್‌ ಕುಮಾರ್ ಅವರು ಆರೋಪಿಸಿದ್ದಾರೆ.

ತಹಶೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಹುದ್ದೆಯಲ್ಲಿದ್ದ ಸೃಜನ್ ಮತ್ತು ಅಂಬರೀಷ್ ತಹಶೀಲ್ದಾರ್ ದಿಲ್‌ಶಾದ್‌ ಅಲಿ ಮಹತ್ ಅವರ ಸಹಿಯನ್ನು ನಕಲಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ನನ್ನ ಸಹಿ ನಕಲಿಯಾದದ್ದು ನಿಜ. ನನ್ನ 30 ವರ್ಷದ ಕರ್ತವ್ಯದಲ್ಲಿ ಇಂತಹ ಘಟನೆ ಮೊದಲಿಗೆ ನಡೆದಿದೆ. ಸಿಬ್ಬಂದಿಗಳಾದ ಸೃಜನ್ ಮತ್ತು ಅಂಬರೀಷ್ ಅವರು ನನ್ನ ಸಹಿಯನ್ನು ನಕಲಿ ಮಾಡಿದ್ದಾರೆ. ಡಿಜಿಟಲ್ ಸಹಿಯನ್ನು ಪ್ರಿಂಟ್ ತೆಗೆದುಕೊಂಡು ನಕಲು ಮಾಡಿದ್ದಾರೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದು ಬೀದರ್ ತಹಶೀಲ್ದಾರ್ ದಿಲ್‌ಶಾದ್‌ ಅಲಿ ಮಹತ್ ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News