ಬೀದರ್ | ವ್ಯಕ್ತಿ ಕಾಣೆ; ಪತ್ತೆಗಾಗಿ ಮನವಿ
Update: 2025-07-02 19:43 IST
ಬೀದರ್ : ನಗರದ ಮಿರಾಗಂಜ್ ನಿವಾಸಿಯಾದ ವ್ಯಕ್ತಿಯೊಬ್ಬರು ಕಾಣೆಯಾಗಿದ್ದು, ಮಾಹಿತಿ ಸಿಕ್ಕಲ್ಲಿ ತಿಳಿಸಬೇಕು ಎಂದು ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅನೀಲಕುಮಾರ್ ತುಕಾರಾಮ್ ಮಂಗಲಗಿಕರ್ (49) ಕಾಣೆಯಾದ ವ್ಯಕ್ತಿಯಾಗಿದ್ದು, ಇವರು ಜೂ.23 ರಂದು ಮನೆಯಿಂದ ಹೊರಗಡೆ ಹೋಗಿ ಕಾಣೆಯಾಗಿದ್ದಾರೆ.
ಕಾಣೆಯಾದ ವ್ಯಕ್ತಿಯು 5.5 ಅಡಿ ಎತ್ತರ ಇದ್ದು, ತೆಳುವಾದ ಮೈಕಟ್ಟು, ಗೋಧಿ ಮೈಬಣ್ಣ, ನೇರ ಮುಗು ಇದ್ದು, ಕುತ್ತಿಗೆಗೆ ಹಳೆಯ ಕಟ್ಟಾದ ಗಾಯವಿದೆ. ಕಾಣೆಯಾಗಿರುವ ಸಮಯದಲ್ಲಿ ಈ ವ್ಯಕ್ತಿಯ ಮೈಮೇಲೆ ಕಪ್ಪು ಹಳದಿ ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುವ ಇವರು ಕನ್ನಡ, ಹಿಂದಿ ಹಾಗೂ ಮರಾಠಿ ಭಾಷೆ ಮಾತನಾಡುತ್ತಾರೆ.
ಈ ಕಾಣೆಯಾದ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ಬೀದರ್ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಮೊಬೈಲ್ ಸಂಖ್ಯೆ: 94808 03445 ಗೆ ಸಂಪರ್ಕಿಸುವಂತೆ ಅವರು ಮನವಿ ಮಾಡಿದ್ದಾರೆ.