ಬೀದರ್ | ಟ್ರಾವೆಲ್ಲರ್-ಗೂಡ್ಸ್ ಟೆಂಪೋ ಢಿಕ್ಕಿ : ಗಾಯಾಳು ಮೃತ್ಯು
Update: 2025-03-02 18:17 IST
ಬೀದರ್ : ಟ್ರಾವೆಲ್ಲರ್ ಮತ್ತು ಗೂಡ್ಸ್ ಟೆಂಪೋ ನಡುವೆ ಢಿಕ್ಕಿ ಸಂಭವಿಸಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.
ಜನವಾಡಾ ಗ್ರಾಮದ ನಿವಾಸಿ ದಿಲೀಪ್ ಕಾಳೆಕರ್ ಮೃತ ವ್ಯಕ್ತಿ ಎಂದು ತಿಳಿದುಬಂದಿದೆ.
ಪ್ರಯಾಗರಾಜನಲ್ಲಿ ನಡೆದ ಮಹಾ ಕುಂಭಮೇಳ ಮುಗಿಸಿ ವಾಪಸ್ಸು ನಗರಕ್ಕೆ ಬರುವ ಸಂದರ್ಭದಲ್ಲಿ ಮಹಾರಾಷ್ಟ್ರದ ನಾಗಪುರ್ ಹತ್ತಿರದ ವಾರ್ಧಾದಲ್ಲಿ ಟ್ರಾವೆಲ್ಲರ್ ಮತ್ತು ಗೂಡ್ಸ್ ಟೆಂಪೋ ನಡುವೆ ಅಪಘಾತ ಸಂಭವಿಸಿ ನಗರದ 15 ಜನ ಗಾಯಗೊಂಡಿದ್ದರು. ಗಾಯಾಳುಗಳಿಗೆ ವಾರ್ಧಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ವಿಷಯ ತಿಳಿದ ಜಿಲ್ಲಾಧಿಕಾರಿಗಳು ಮೃತದೇಹವನ್ನು ಬೀದರ್ ಗೆ ತರಲು ಜಿಲ್ಲಾಡಳಿತದಿಂದ ಅಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.