×
Ad

ಬೀದರ್ | ಪಕ್ಷದ ಹಿರಿಯರ ಆಶೀರ್ವಾದದಿಂದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ್ದೇನೆ : ಫರೀದುಲ್ಲಾ ಖಾನ್

Update: 2025-02-11 19:43 IST

ಬೀದರ್ : ಪಕ್ಷದ ಹಿರಿಯರ ಆಶೀರ್ವಾದದಿಂದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷನಾಗಿ ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸಿದ್ದೇನೆ ಎಂದು ನೂತನ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಫರೀದುಲ್ಲಾ ಖಾನ್ ಹೇಳಿದ್ದಾರೆ.

ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಅರಣ್ಯ ಪರಿಸರ ಹಾಗೂ ಜೀವಶಾಸ್ತ್ರ ಸಚಿವ ಈಶ್ವರ್ ಖಂಡ್ರೆ, ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್, ಸಂಸದ ಸಾಗರ್ ಖಂಡ್ರೆ ಮತ್ತು ಕಾಂಗ್ರೆಸ್ ನ ಜಿಲ್ಲಾಧ್ಯಕ್ಷ ಬಸವರಾಜ್ ಜಾಬಶೆಟ್ಟಿ ಸೇರಿದಂತೆ ಜಿಲ್ಲೆಯ ಎಲ್ಲಾ ನಾಯಕರ ಆಶೀರ್ವಾದದಿಂದ ಮೂರನೇ ಬಾರಿಗೆ ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ್ದೇನೆ ಎಂದು ತಿಳಿಸಿದರು.

2017 ರಲ್ಲಿ ನಾನು 891 ಮತ ಪಡೆದು ಪ್ರಥಮ ಬಾರಿಗೆ ಜಿಲ್ಲಾಧ್ಯಕ್ಷನಾಗಿದ್ದೇನೆ. 2021 ರಲ್ಲಿ 1,814 ಮತ ಪಡೆದು ಯುವ ಮತದಾರರು ಎರಡನೇ ಬಾರಿಗೆ ಅವಕಾಶ ನೀಡಿದರು. ಈಗ 65,489 ಮತದಾರರ ಪೈಕಿ 9,753 ಮತ ಪಡೆದು ಮೂರನೇ ಬಾರಿಗೆ ಜಿಲ್ಲಾಧ್ಯಕ್ಷನಾಗುವ ಮೂಲಕ ಇಡೀ ರಾಜ್ಯದಲ್ಲಿ ಮೂರನೇ ಸಲ ಜಿಲ್ಲಾಧ್ಯಕ್ಷನಾಗಿದ್ದವನು ನಾನೇ ಮೊದಲಿಗನಾಗಿದ್ದೇನೆ. ನಮ್ಮ ಹಿರಿಯರು ಇಂತಹ ಅವಕಾಶ ನೀಡಿದ್ದಕ್ಕೆ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

2024ರ ಆಗಸ್ಟ್ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 131 ಉಮೇದುವಾರರು ಕಣದಲ್ಲಿದ್ದರು. ಒಟ್ಟು 65,489 ಮತದಾರರು ನಮ್ಮ ಜಿಲ್ಲೆಯಲ್ಲಿದ್ದು, ಎಲ್ಲಾ ಮತದಾರರು ಮತ ಚಲಾವಣೆ ಮಾಡಿದ್ದಾರೆ. ಅದರಲ್ಲಿ 30,827 ಮತದಾರರ ಹಕ್ಕು ಸ್ವೀಕೃತಗೊಂಡಿದ್ದು, 34,901 ಮತಗಳು ತಿರಸ್ಕೃತಗೊಂಡಿವೆ. ಫೆ.7 ರಂದು ಫಲಿತಾಂಶ ಹೊರಬಂದಿದೆ ಎಂದು ವಿವರಿಸಿದರು.

ಯುವ ಕಾಂಗ್ರೇಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಲಿಶಾನ್ ಖಾದ್ರಿ ಮಾತನಾಡಿ, ರಾಜ್ಯದಲ್ಲಿ ಒಟ್ಟು 26 ಲಕ್ಷ ಯುವ ಕಾಂಗ್ರೇಸ್ ಮತದಾರರಿದ್ದಾರೆ. ಅದರಲ್ಲಿ 11 ಲಕ್ಷ ಯುವ ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಜಿಲ್ಲೆಯಿಂದ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಯುವ ಕಾಂಗ್ರೇಸ್ ರಾಜ್ಯಾಧ್ಯಕ್ಷ ಮಂಜುನಾಥ್ ಸೇರಿದಂತೆ ರಾಜ್ಯದ ಎಲ್ಲಾ ಮಂತ್ರಿ, ಶಾಸಕ ಹಾಗೂ ಘಟಕದ ಎಲ್ಲಾ ಮುಖಂಡರಿಗೆ ಅಭಿನಂದಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಯುವ ಕಾಂಗ್ರೇಸ್ ಅಧ್ಯಕ್ಷ ಇಮ್ರಾನ್ ಖಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡೇವಿಡ್ ಕೆಂಪೆ, ಬೀದರ್ ದಕ್ಷಿಣದ ಪ್ರಧಾನ ಕಾರ್ಯದರ್ಶಿ ರಾಹುಲ್ ಅಮಲಾಪುರಕರ್, ನಗರ ಘಟಕದ ಅಧ್ಯಕ್ಷ ಎಂ.ಡಿ. ಮುಕಿಮೊದ್ದಿನ್, ಬೀದರ್ ಉತ್ತರ ಕ್ಷೇತ್ರದ ಉಪಾಧ್ಯಕ್ಷ ಸಂತೋಷ್ ಚಿಮಕೊಡೆ, ನಗರ ಘಟಕದ ಉಪಾಧ್ಯಕ್ಷ ಜುನೈದ್ ಅಕ್ರಮ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News