×
Ad

ಬೀದರ್ | ರಮಾಬಾಯಿ ಇಲ್ಲದಿದ್ದರೆ ಅಂಬೇಡ್ಕರ್ ಅವರು ಬದುಕಿನಲ್ಲಿ ಬೆಳಕು ಕಾಣುವುದಕ್ಕೆ ಸಾಧ್ಯವಿರಲಿಲ್ಲ: ಡಾ.ಜ್ಞಾನಪ್ರಕಾಶ್ ಸ್ವಾಮಿ

Update: 2025-02-08 17:57 IST

ಬೀದರ್ : ರಮಾಬಾಯಿ ಇಲ್ಲದೇ ಇದ್ದರೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಯಾವತ್ತೂ ಕೂಡ ತನ್ನ ಬದುಕಿನಲ್ಲಿ ಬೆಳಕು ಕಾಣುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ರಮಾಬಾಯಿ ಅವರ ತ್ಯಾಗದಿಂದಲೇ ಅಂಬೇಡ್ಕರ್ ಅವರಿಗೆ ಶಿಕ್ಷಣ ಪಡೆಯುವುದಕ್ಕೆ ಸಾಧ್ಯವಾಯಿತು ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಡಾ.ಜ್ಞಾನಪ್ರಕಾಶ್ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ಸಾಯಂಕಾಲ ನಗರದ ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ನೌಕರ ಸಂಘದ ವತಿಯಿಂದ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಅವರ 127ನೇ ಜಯಂತಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.

ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಅವರು ಕಡು ಬಡತನದಲ್ಲಿ ಸಂಸಾರದ ನೌಕೆಯನ್ನು ನಡೆಸಿ, ಅಂಬೇಡ್ಕರ್ ಅವರಿಗೆ ಆಧುನಿಕ ಭಾರತ ನಿರ್ಮಾಣದ ಶಿಲ್ಪಿಯಾಗುವಂತೆ ಮಾಡಿದರು. ಹುಟ್ಟಿದ ನಾಲ್ಕು ಮಕ್ಕಳ ಸಾವು, ನೋವು ತಾವೆ ಅನುಭವಿಸಿ ಈ ನೆಲಕ್ಕೆ ಅಂಟಿದ ಅಸಮಾನತೆ ನಿರ್ಮೂಲನೆ ಮಾಡಲು, ಸಮೃದ್ಧ ಸಮಾಜ ನಿರ್ಮಾಣಕ ಮಾಡುವುದಕ್ಕೆ ಶಕ್ತಿಯಾದರು. ಮಹಿಳೆಯರ ಸ್ವಾಭಿಮಾನದ ಶಕ್ತಿ, ಪುರುಷರ ಆದರ್ಶ ತಾಯಿಯೇ ರಮಾಬಾಯಿ ಅಂಬೇಡ್ಕರ್ ಆಗಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವೀರಶೇಟ್ಟಿ ದೀನೆ ಬರೆದಿರುವ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ನೆನೆಯುವ ಆ ದಿನಗಳು ಎಂಬ ಕೃತಿ ಬಿಡುಗಡೆ ಮಾಡಲಾಯಿತು. 86 ಜನರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಭೀಕ್ಕುಣಿ ಅರ್ದಸ್ಮಿತಾ, ಕವಿತಾ ಹುಗ್ಗಿ ಪಾಟೀಲ್, ಗೋವಿಂದ್ ಪೂಜಾರಿ, ಲಕ್ಷ್ಮಿ ಬಸಪ್ಪ, ಮಹಾದೇವಿ ದಾಂಡೇಕರ್, ಅಂಬಾದಾಸ್ ಗಾಯಕವಾಡ್, ಸುಬ್ಬಣ್ಣ ಕರಕನಳ್ಳಿ ಹಾಗೂ ಸಂಘಪ್ರಿಯಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News