×
Ad

ಬೌದ್ಧಿಕ, ವೈಚಾರಿಕ ನಿಲುವು ಮಂಡಿಸುವ ಮೂಲಕ ಮಾಧ್ಯಮಗಳಿಂದ ಹೊಸ ಜಗತ್ತು ಕಟ್ಟಲು ಸಾಧ್ಯ : ಡಾ.ಭೀಮಾಶಂಕರ್ ಬಿರಾದಾರ್

Update: 2025-10-15 18:14 IST

ಬೀದರ್ : ಲೋಕದ ಹಲವು ಬಿಕ್ಕಟ್ಟುಗಳಿಂದ ಬಿಡುಗಡೆಯಾಗಲು ಸಾಹಿತ್ಯ, ಕೃತಿ ಮತ್ತು ಮಾಧ್ಯಮಗಳು ಪ್ರಮಾಣುಗಳಾಗಿವೆ. ಬೌದ್ಧಿಕ ಮತ್ತು ವೈಚಾರಿಕ ನಿಲುವುಗಳನ್ನು ಮಂಡಿಸುವ ಮೂಲಕ ಮಾಧ್ಯಮಗಳಿಂದ ಹೊಸ ಜಗತ್ತು ಕಟ್ಟಲು ಸಾಧ್ಯವಿದೆ. ಲೋಕದ ಗ್ರಹಿಕೆಗೆ, ಸಮಾಜವನ್ನು ನೋಡುವ ನೋಟಕ್ರಮ ನೀಡುವ ಸಾಧನ ಮಾಧ್ಯಮಗಳಾಗಿವೆ ಎಂದು ಬಸವೇಶ್ವರ್ ಕಾಲೇಜಿನ ಉಪನ್ಯಾಸಕ ಡಾ.ಭೀಮಾಶಂಕರ್ ಬಿರಾದಾರ್ ಅವರು ಅಭಿಪ್ರಾಯಪಟ್ಟರು.

ಮಂಗಳವಾರ ಬಸವಕಲ್ಯಾಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯುಎಸಿ ಹಾಗೂ ಕನ್ನಡ ವಿಭಾಗದ ವತಿಯಿಂದ ಆಯೋಜಿಸಿದ್ದ 'ಮಾಧ್ಯಮ ಮತ್ತು ಯುವಜನತೆ' ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚರಿತ್ರೆ ಅರಿಯುವಲ್ಲಿ, ವರ್ತಮಾನ ಗ್ರಹಿಸುವಲ್ಲಿ, ಭವಿಷ್ಯತ್ತನ್ನು ರೂಪಿಸುವಲ್ಲಿ ಮಾಧ್ಯಮಗಳು ಮಹತ್ವದ ಪಾತ್ರ ವಹಿಸುತ್ತವೆ. ಮಾಧ್ಯಮ ಸತ್ಯ ಶೋಧನೆಗೆ ದಾರಿಯಾಗಬೇಕು. ಕೃಷಿಕರು, ಶ್ರಮಿಕರು ಎದುರಿಸುವ ಬಿಕ್ಕಟ್ಟಗಳು ಅಧಿಕಾರದಲ್ಲಿದ್ದವರಿಗೆ ತೋರಿಸಿ, ಪರಿಹಾರ ಕಂಡುಕೊಳ್ಳುವ ದಾರಿಯಾಗಿ ಮಾಧ್ಯಮ ಕಾರ್ಯನಿರ್ವಹಿಸಬೇಕು ಎಂದರು.

ಪತ್ರಕರ್ತ ಬಾಲಾಜಿ ಕುಂಬಾರ್ ಅವರು ಮಾತನಾಡಿ, ಈ ಕಾಲದಲ್ಲಿ ತಂತ್ರಜ್ಞಾನದ ಮೂಲಕ ಜಗತ್ತನ್ನು ನೋಡಲು ಕಲಿತಿದ್ದೇವೆ. ಆದರೆ, ಗ್ರಾಮೀಣ ಭಾರತದ ಹಲವಾರು ಸಮಸ್ಯೆ ಮತ್ತು ಸವಾಲುಗಳನ್ನು ಬಗೆಹರಿಸಲು ಸಾಧ್ಯವಾಗಿಲ್ಲ‌. ಹಳ್ಳಿ ಮತ್ತು ನಗರಗಳು ಎದುರಿಸುವ ವಿಭಿನ್ನ ಸಮಸ್ಯೆಗಳು ಪರಿಹರಿಸಲು ಮಾಧ್ಯಮ ಮಾರ್ಗ ಅಗತ್ಯವಾಗಿದೆ ಎಂದು ಹೇಳಿದರು.

ಪ್ರಾಚಾರ್ಯ ಡಾ. ಪ್ರಹ್ಲಾದ್ ಚೆಂಗಟಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಶರಣಬಸಪ್ಪ ಜನ್ನಾ, ಸುಭಾಷ್ ಮಚಕುರಿ, ಡಾ. ಪೀರಪ್ಪ ಸಜ್ಜನ್, ಬಸವರಾಜ್ ಬಿರಾದಾರ್, ಚಿನ್ನಮ್ಮ, ಮಹೇಶ್ ಮಂಠಾಳೆ, ಫರೀದ್, ಅನಿಲ್ ಚಾಂದೆ, ಅಂಜಲಿ ಗಜರೆ, ಭಾಗ್ಯಶ್ರೀ, ನರೇಂದ್ರ, ಸುಸ್ಮೀತಾ, ಐಕ್ಯುಎಸಿ ಸಂಯೋಜಕ ಡಾ. ಚಂದ್ರಕಾಂತ್ ಗಾಯಕವಾಡ್, ಪ್ರೊ. ಮೀನಾಕ್ಷಿ ಬಿರಾದಾರ್ ಹಾಗೂ ಡಾ. ಶ್ರೀಕಾಂತ್ ಚೌವ್ಹಾಣ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News