×
Ad

ಬೀದರ್ | ಗ್ರಾಮ ಪಂಚಾಯತ್ ನ ಡಾಟಾ ಎಂಟ್ರಿ ಆಪರೇಟರ್ ಆರೆಸ್ಸೆಸ್ ಪಥ ಸಂಚಲನದಲ್ಲಿ ಭಾಗಿ; ಸೂಕ್ತ ಕ್ರಮಕ್ಕಾಗಿ ಮನವಿ

Update: 2025-10-28 23:53 IST

ಬೀದರ್ : ಅ. 7 ರಂದು ಔರಾದ್ (ಬಿ) ಪಟ್ಟಣದಲ್ಲಿ ನಡೆದ ಆರೆಸ್ಸೆಸ್ ಪಥ ಸಂಚಲನದಲ್ಲಿ ಹಾಗೂ ಅ. 5 ರಂದು ಕಮಲನಗರ್ ತಾಲೂಕಿನ ಕೋರೆಕಲ್‌ನಲ್ಲಿ ನಡೆದ ಆರೆಸ್ಸೆಸ್ ಪಥ ಸಂಚಲನದಲ್ಲಿ ಗ್ರಾಮ ಪಂಚಾಯತ್ ನ ಡಾಟಾ ಎಂಟ್ರಿ ಆಪರೇಟರ್ ಭಾಗವಸಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸೇನೆಯು ಮನವಿ ಮಾಡಿದೆ.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಔರಾದ್ (ಬಿ) ತಾಲೂಕಿನ ಏಕಲಾರ್ ಗ್ರಾಮ ಪಂಚಾಯತ್ ನಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿರುವ ಅನಿಲ್ ಸ್ವಾಮಿ ಹಾಗೂ ಕಮಲನಗರ್ ತಾಲೂಕಿನ ಕೋರೆಕಲ್ ಗ್ರಾಮ ಪಂಚಾಯತ್ ನಲ್ಲಿ ಕೆಲಸ ಮಾಡುತ್ತಿರುವ ಭಗವಾನ್ ಅವರು ಆರೆಸ್ಸೆಸ್ ಪಥ ಸಂಚಲನದಲ್ಲಿ ಭಾಗವಹಿಸಿದ್ದು‌, ಇದಕ್ಕೆ ಸಂಬಂಧಿಸಿದಂತೆ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ ಎಂದು ದಲಿತ ಸೇನೆ ಆರೋಪಿಸಿದೆ.

ಇವರು ಆರೆಸ್ಸೆಸ್ ಪಥ ಸಂಚಲನದಲ್ಲಿ ಭಾಗವಹಿಸಿದ್ದು, ರಾಜ್ಯ ಸರ್ಕಾರದ ಸೇವಾ ನಿಬಂಧನೆಗಳಿಗೆ ವಿರುದ್ಧವಾಗಿದೆ. ಹಾಗಾಗಿ ತಕ್ಷಣವೇ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು‌ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಮನವಿ ಪತ್ರದ ಮೇಲೆ ದಲಿತ ಸೇನೆಯ ಅಧ್ಯಕ್ಷ ಸುನಿಲ್ ಮಿತ್ರಾ, ವಿದ್ಯಾರ್ಥಿ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ರತ್ನದೀಪ್ ಕಸ್ತೂರೆ ಹಾಗೂ ದಲಿತ್ ವಿದ್ಯಾರ್ಥಿ ಪರಿಷತ್ ನ ಅಧ್ಯಕ್ಷ ಆನಂದ್ ಕಾಂಬಳೆ ಅವರ ಸಹಿ ಹಾಕಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News