×
Ad

ಬಸವಕಲ್ಯಾಣದ ವಿವಿಧೆಡೆ ವಕ್ಫ್ ತಿದ್ದುಪಡಿ ಕಾಯಿದೆ ವಿರುದ್ಧ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

Update: 2025-07-04 18:35 IST

ಬೀದರ್ : ಬಸವಕಲ್ಯಾಣ ನಗರದ ವಿವಿಧೆಡೆ ವಕ್ಫ್ ತಿದ್ದುಪಡಿ ಕಾಯಿದೆ ವಿರುದ್ಧ ಮಾನವ ಸರಪಳಿ ನಿರ್ಮಿಸಿ ಇಂದು ಪ್ರತಿಭಟನೆ ಮಾಡಲಾಯಿತು.

ನಗರದ ಜಾಮಾ ಮಸೀದಿ, ಶಹಪುರ್ ಗಲ್ಲಿ, ಶಿವಾಜಿ ಪಾರ್ಕ್ ಮತ್ತು ಆಟೋ ನಗರದಲ್ಲಿ ನೂರಾರು ಜನ ಸೇರಿ ಮಾನವ ಸರಪಳಿ ನಿರ್ಮಿಸಿ ವಕ್ಫ್ ತಿದ್ದುಪಡಿ ಕಾಯಿದೆಗೆ ವಿರೋಧ ವ್ಯಕ್ತಪಡಿಸಿದರು.

ವಕ್ಫ್ ತಿದ್ದುಪಡಿ ಕಾಯಿದೆಯನ್ನು ವಾಪಸ್ಸು ಪಡೆಯಬೇಕು. ಇದು ಮುಸ್ಲಿಂರ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕತೆಯ ವಿರುದ್ಧವಾಗಿದೆ. ಯಾವುದೇ ಮುಸಲ್ಮಾನರು ಈ ಕಾಯಿದೆಯನ್ನು ಒಪ್ಪುವುದಿಲ್ಲ. ದರ್ಗಾ, ಈದ್ಗಾ, ದಸ್ಕಾನ್, ಮಸೀದಿ ಹಾಗೂ ಮುಸ್ಲಿಂರಿಗೆ ಸಂಬಂಧಿಸಿದ ಇನ್ನಿತರ ಸ್ಥಳಗಳು ಮುಸ್ಲಿಂರ ಸಾಂಸ್ಕೃತಿಕ ಮತ್ತು ಧಾರ್ಮಿಕ ಗುರುತುಗಳಾಗಿವೆ. ಇವು ಮುಸ್ಲಿಂರ ಧಾರ್ಮಿಕ ಪರಂಪರೆಯಾಗಿವೆ. ಇದರಲ್ಲಿ ಸರಕಾರ ಮಧ್ಯ ಪ್ರವೇಶ ಮಾಡುವುದು ಸರಿಯಲ್ಲ ಎಂದು ಆಗ್ರಹಿಸಲಾಗಿದೆ.

ಭಾರತದಾದ್ಯಂತ ಈ ಕಾಯಿದೆ ವಿರುದ್ಧ ಹಲವು ಮನವಿ ಪತ್ರ ಸಲ್ಲಿಸಿದರೂ ಕೂಡ ಸರ್ಕಾರ ಈ ಕಡೆ ಗಮನ ಹರಿಸದೆ ಕಾಯಿದೆ ವಾಪಸ್ಸು ಪಡೆಯುತ್ತಿಲ್ಲ. ಇದರಿಂದಾಗಿ ನಾವು ಮಾನವ ಸರಪಳಿ ನಿರ್ಮಿಸಿ ಜನ ಜಾಗೃತಿ ಮೂಡಿಸುತ್ತಿದ್ದೇವೆ. ವಕ್ಫ್ ತಿದ್ದುಪಡಿ ಕಾಯಿದೆ ವಾಪಸ್ಸು ಪಡೆಯುವವರೆಗೂ ನಮ್ಮ ಹೋರಾಟ ಜಾರಿಯಲ್ಲಿರುತ್ತದೆ ಎಂದು ವೆಲ್ಫೇರ್ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಮುಜಾಹಿದ್ ಪಾಷಾ ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕಲೀಮ್ ಗೊಬ್ರೆ, ಅನ್ವರ್ ಭೋಸ್ಗೆ, ಸೌದ್ ಭೋಸ್ಗೆ, ಅಜಯ್ ಭೋಸ್ಗೆ, ಪರ್ವೀಜ್ ಶೇಕ್, ಬಿಲಾಲ್ ಅಹಮದ್, ಶಕೀಲ್, ವಾಜೀದ್, ತನ್ವಿರ್ ಸಲ್ಮಾನ್, ರಫೀಕ್ ಕಾರಿಗರ್, ಶೋಹಿಬ್ ಶೇಕ್, ನಸೀರ್, ಹಸನ್, ಹಫೀಜ್, ಸಲಾವುದ್ದಿನ್ ಮತ್ತು ಹಫೀಜ್ ಸಾಬ್ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News