×
Ad

ಬೀದರ್‌ ಜಿಲ್ಲೆಯ ಶಿವಾನಿಗೆ ʼಕನ್ನಡ ಸರಿಗಮಪ ಸೀಸನ್ 21ʼರ ಕಿರೀಟ

Update: 2025-06-06 17:02 IST

ಬೀದರ್ : ಕನ್ನಡ ಸರಿಗಮಪ ಸೀಸನ್ 21ರಲ್ಲಿ ಬೀದರ್ ನ ಗಾಯಕಿ ಶಿವಾನಿ ಶಿವದಾಸ್ ಸ್ವಾಮಿ ಅವರು ವಿಜೇತೆಯಾಗಿ ಹೊರಹೊಮ್ಮಿದ್ದಾರೆ.

ಶಿವಾನಿ ಅವರು ತಮ್ಮ ಅದ್ಭುತವಾದ ಕಂಠದಿಂದ ಎಲ್ಲರ ಗಮನ ಸೆಳೆದಿದ್ದು, ಇದೀಗ ಅವರ ಆ ಕಂಠಕ್ಕೆ ಜೀ ಕನ್ನಡ 'ಸರಿಗಮಪ' ದ ಕಿರೀಟ ಒಲಿದಿದೆ. ಆರಾಧ್ಯ ರಾವ್ ಅವರು ಮೊದಲ ರನ್ನರ್ ಅಪ್ ಆಗಿ ಹೊರ ಹೊಮ್ಮಿದರೆ, ರಶ್ಮಿ ಅವರು ಎರಡನೇ ರನ್ನರ್ ಅಪ್ ಆಗಿದ್ದಾರೆ. ಈ ಸಲದ ಸರಿಗಮಪ ಫಿನಾಲೆಯಲ್ಲಿ ಮೂವರು ಯುವತಿಯರೇ ಇದ್ದದ್ದು ವಿಶೇಷವಾಗಿತ್ತು.

ಶಿವಾನಿ ಅವರು ಸರಿಗಮಪ ವಿನ್ನರ್ ಆಗಿ ಹೊರ ಹೊಮ್ಮಿದ್ದಕ್ಕೆ ಜಿಲ್ಲೆಯ ಪ್ರಮುಖರು ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳು ಸಲ್ಲಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News