ಸುಭಾಷ್ ಚಂದ್ರ ಬೋಸ್ ಅವರು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ: ವೀರಭದ್ರಪ್ಪ ಉಪ್ಪಿನ್
ಬೀದರ್: ನೇತಾಜಿ ಸುಭಾಷ್ ಚಂದ್ರ ಬೋಸ್ ರವರು ಅಪ್ಪಟ ದೇಶ ಭಕ್ತರು ಹಾಗೂ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಎಂದು ಪಶು ವೈದ್ಯಕೀಯ ವಿಶ್ವ ವಿದ್ಯಾಲಯದ ನಿವೃತ್ತ ಅಧಿಕಾರಿ ವೀರಭದ್ರಪ್ಪ ಉಪ್ಪಿನ್ ಅವರು ಅಭಿಪ್ರಾಯಪಟ್ಟರು.
ಅಖಿಲ ಭಾರತ ವಿಶ್ವವಿದ್ಯಾಲಯಗಳ ನೌಕರರ ಒಕ್ಕೂಟ ಹಾಗೂ ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯಿಂದನಗರದ ಬಸವನಗರ ಬಡಾವಣೆಯಲ್ಲಿ ನಿವೃತ್ತ ಸೈನಿಕರ ಉಪಸ್ಥಿತಿಯಲ್ಲಿ ಆಯೋಜಿಸಲಾದ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 127 ನೇ ಜನ್ಮ ದಿನಾಚರಣೆ ಹಾಗೂ ಪರಿಸರ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.
ಬ್ರಿಮ್ ಆಸ್ಪತ್ರೆಯ ತಂತ್ರಜ್ಞ ಅಧಿಕಾರಿ ಅರವಿಂದ ಕುಲಕರ್ಣಿ ಅವರು ಮಾತನಾಡುತ್ತಾ, ಇಂದಿನ ದಿನಗಳಲ್ಲಿ ಯುವ ಜನತೆಯಲ್ಲಿ ದೇಶ ಅಭಿಮಾನದ ಕೊರತೆ ಕಂಡು ಬರುತ್ತಿರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಚಿಕ್ಕ ವಯಸ್ಸಿನಲ್ಲೇ ಬೋಸ್‌ರಲ್ಲಿದ್ದ ದೇಶ ಪ್ರೇಮವನ್ನು ಇಂದಿನ ಯುವಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕುಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ನರೇಂದ್ರ ಕುಮಾರ್, ನಗರಸಭೆಯ ನಿವೃತ್ತ ಉದ್ಯೋಗಿ ರತ್ನಮ್ಮ, ನಿವೃತ್ತ ಸೈನಿಕರಾದ ಸಂಗಮೇಶ್ ಕಾರಾಮುಂಗಿ, ಗೌತಮ್, ರವಿಕುಮಾರ್, ಪ್ರವೀಣಕುಮಾರ್, ಗಣೇಶ್, ಬಸವರಾಜ್, ನಂದು, ಸುವರ್ಣ, ಶಿಲ್ಪಾರಾಣಿ, ಅನಿತಾ ಹಾಗೂ ಸರಸ್ವತಿ ಸೇರಿದಂತೆ ಬಡಾವಣೆಯ ಹಲವರು ಉಪಸ್ಥಿತರಿದ್ದರು.