ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲಾ ಬ್ಯಾರಿಗಳ ಒಕ್ಕೂಟದ (ರಿ) ವತಿಯಿಂದ ʼಬ್ಯಾರಿ ಭಾಷಾ ದಿನಾಚರಣೆʼಯನ್ನು ಇತ್ತೀಚೆಗೆ ನಗರದ ನೆಹರು ನಗರದಲ್ಲಿರುವ ಒಕ್ಕೂಟದ ಕಚೇರಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಗೌರವಾಧ್ಯಕ್ಷ ಕೆ.ಮೊಹಮ್ಮದ್, "ನಾವು ಬ್ಯಾರಿ ಭಾಷೆ, ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು. ಮುಂದಿನ ಪೀಳಿಗೆಗೆ ನಮ್ಮ ಭಾಷೆಯನ್ನು ಹೆಮ್ಮೆಯಿಂದ ಹಸ್ತಾಂತರಿಸಬೇಕು" ಎಂದು ಹೇಳಿದರು.

ಒಕ್ಕೂಟದ ಅಧ್ಯಕ್ಷರಾದ ಎಚ್.ಯು.ಫಾರೂಕ್ ಮಾತನಾಡಿ, "ಬ್ಯಾರಿ ಭಾಷೆಯು ಕೇವಲ ಹಿರಿಯರ, ಅಜ್ಜ-ಅಜ್ಜಿಯರ ಭಾಷೆಯಾಗಿ ಉಳಿಯಬಾರದು. ಅದು ನಮ್ಮ ಮಕ್ಕಳು ಮತ್ತು ಯುವಕರ ಭಾಷೆಯಾಗಬೇಕು" ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಸಿ.ಕೆ.ಇಬ್ರಾಹಿಂ, ಉಪಾಧ್ಯಕ್ಷ ಬದ್ರಿಯಾ ಮೊಹಮ್ಮದ್ ಮಾತನಾಡಿದರು.

ಪ್ರಧಾನ ಕಾರ್ಯದರ್ಶಿ ಅಬ್ದುಲ್ ಕಬೀರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರೆ, ಖಜಾಂಚಿ ವೈ.ಎಚ್. ಇಬ್ರಾಹಿಂ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor