SKSSF ಚಿಕ್ಕಮಗಳೂರು ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ
ಸಾದಿಕ್ ಅಝ್ಹರಿ ಅಧ್ಯಕ್ಷ , ಝೈದ್ ಫೈಝಿ ಪ್ರಧಾನ ಕಾರ್ಯದರ್ಶಿ
ಮೂಡಿಗೆರೆ, ಅ. 19: SKSSF ಚಿಕ್ಕಮಗಳೂರು ಜಿಲ್ಲಾ ಸಮಿತಿಯ 2026ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಅ.19ರಂದು ಮೂಡಿಗೆರೆಯಲ್ಲಿ ನಡೆಯಿತು.
ಅಧ್ಯಕ್ಷರಾಗಿ ಸಾದಿಕ್ ಅಝ್ಹರಿ ಕೊಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಝೈದ್ ಫೈಝಿ ಚಕ್ಕಮಕ್ಕಿ, ಖಜಾಂಜಿಯಾಗಿ ಅಬ್ದುಲ್ ವಾಹಿದ್ ಮೂಡಿಗೆರೆ ಹಾಗೂ ವರ್ಕಿಂಗ್ ಕಾರ್ಯದರ್ಶಿಯಾಗಿ ಯಾಸೀರ್ ಚಕ್ಕಮಕ್ಕಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಜಿಯಾ ಹೈದರ್ ಮೂಡಿಗೆರೆ, ಯುನುಸ್ ಹ್ಯಾಂಡ್ ಪೋಸ್ಟ್, ಮುಹಮ್ಮದ್ ಶಾಝ್ ನಾರ್ವೆ, ಇಕ್ಬಾಲ್ ಮೂಡಿಗೆರೆ ಹಾಗೂ ಸಲಾಂ ಬಣಕಲ್ ಆಯ್ಕೆಯಾಗಿದ್ದಾರೆ.
ಜೊತೆ ಕಾರ್ಯದರ್ಶಿಗಳಾಗಿ ಶರೀಫ್ ಬಿಳಗುಳ, ಮುಸ್ತಫಾ ಭೂತನ ಕಾಡು ಹಾಗೂ ಅಶ್ರಫ್ ಖಾದ್ರಿ ಮೂಡಿಗೆರೆ , ಸಂಘಟನಾ ಕಾರ್ಯದರ್ಶಿಗಳಾಗಿ ಸಮದ್ ಬಾಖವಿ ಹ್ಯಾಂಡ್ ಪೋಸ್ಟ್, ನಿಯಾಝ್ ಮೂಡಿಗೆರೆ ಹಾಗೂ ಝೈನುದ್ದೀನ್ ಅಝ್ಹರಿ, ರಾಜ್ಯ ಕೌನ್ಸಿಲರ್ಗಳಾಗಿ ಸಿನಾನ್ ಫೈಝಿ ಚಕ್ಕಮಕ್ಕಿ, ಅಝೀಝ್ ಅರಬ್ಬಿ ಹಾಗೂ ಸಮದ್ ಬಾಖವಿ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಹೀಮ್ ಅಝ್ಹರಿ, ನಾಸಿರ್ ಬಿಳಗುಳ, ಸಲಾಂ ಬಣಕಲ್, ಜಮ್ಶೀದ್ ಬಿಳಗುಳ, ಸಿನಾನ್ ಮೂಡಿಗೆರೆ, ಸದ್ದಾಂ ಫೈಝಿ, ಆಸಿಫ್ ನಾರ್ವೆ, ಮನ್ಸೂರ್, ಅಝೀಝ್ ಹಾಗೂ ಶಮ್ಸುದ್ದೀನ್ ಆಯ್ಕೆಯಾಗಿದ್ದಾರೆ.
ಇಸ್ಮಾಯಿಲ್ ಯಮಾನಿ ಮಂಗಳೂರು ಹಾಗೂ ಹಾರಿಸ್ ಕೌಸರಿ ಕೋಲ್ಪೆ ಅವರ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯ ಪ್ರಾರ್ಥನೆ ಹಾಗೂ ಉದ್ಘಾಟನೆಯನ್ನು ಮುಸ್ತಫಾ ಯಮಾನಿ ಮೂಡಿಗೆರೆ ನೆರವೇರಿಸಿದರು.
ಸಭೆಯಲ್ಲಿ ನಿಕಟ ಪೂರ್ವ ಕಾರ್ಯದರ್ಶಿ ಸಿನಾನ್ ಫೈಝಿ ಸ್ವಾಗತಿಸಿದರು.