×
Ad

ಬಾಲಿವುಡ್‌ಗೆ ಮರಳಲು ಅಭಿಮಾನಿಗಳಿಗೆ ವಿಶೇಷ ಟಾಸ್ಕ್‌ ನೀಡಿದ ನಟ ಇಮ್ರಾನ್‌ ಖಾನ್‌ !

Update: 2023-08-02 21:45 IST

ಮುಂಬೈ: ಬಾಲಿವುಡ್‌ ಅಂಗಳದಲ್ಲಿ ಕೆಲವೇ ಕೆಲವು ವರ್ಷ ಮಿಂಚಿ ಅತಿ ಶೀಘ್ರದಲ್ಲಿ ಮರೆಗೆ ಸರಿದ ನಟರಲ್ಲಿ ಇಮ್ರಾನ್‌ ಖಾನ್‌ ಕೂಡಾ ಒಬ್ಬರು. ಆಮಿರ್‌ ಖಾನ್‌ ಅವರ ಸೋದರಳಿಯ ಆಗಿದ್ದರೂ ಇಮ್ರಾನ್‌ ಖಾನ್‌ಗೆ ಯಾಕೋ ಬಾಲಿವುಡ್‌ ಅಂಗಳದಲ್ಲಿ ಸರಿಯಾಗಿ ನೆಲೆಯೂರಲು ಸಾಧ್ಯ ಆಗಿಲ್ಲ.

“ಜಾನೇ ತೂ... ಯಾ ಜಾನೇ ನಾ, ಐ ಹೇಟ್ ಲವ್ ಸ್ಟೋರಿಸ್, ಡೆಲ್ಲಿ ಬೆಲ್ಲಿ, ಮೇರೆ ಬ್ರದರ್ ಕಿ ದುಲ್ಹನ್ ಮತ್ತು ಏಕ್ ಮೈನ್ ಔರ್ ಏಕ್ ತೂ” ಮೊದಲಾದ ಸಿನೆಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದ ಇಮ್ರಾನ್‌ ಖಾನ್‌ ಇದೀಗ ಮರಳಿ ಬಣ್ಣ ಹಚ್ಚುವ ಬಗ್ಗೆ ಭರ್ಜರಿ ಚರ್ಚೆಗಳು ನಡೆಯುತ್ತಿವೆ.

ತಾನು ಮರಳಿ ಬರಬೇಕೇ ಬೇಡವೇ ಎಂಬ ನಿರ್ಧಾರವನ್ನು ನೆಟ್ಟಿಗರಿಗೆ ಬಿಟ್ಟು ಕೊಟ್ಟಿರುವ ಇಮ್ರಾನ್‌ ಖಾನ್‌ ಸಾಕಷ್ಟು ಕುತೂಹಲವನ್ನು ಹುಟ್ಟಿಸಿದ್ದಾರೆ.

ನಟಿ ಝೀನತ್ ಅಮಾನ್ ಅವರ ಇನ್ಸ್ಟಾಗ್ರಾಮ್ ಪೋಸ್ಟ್‌ ಅಡಿಯಲ್ಲಿ ಅಭಿಮಾನಿಯೊಬ್ಬರ ಕಾಮೆಂಟ್‌ಗೆ ಪ್ರತಿಕ್ರಿಯೆ ನೀಡಿದ ಇಮ್ರಾನ್‌ ಖಾನ್‌, ಮರಳಿ ಬಣ್ಣ ಹಚ್ಚಲು ತಯಾರಿದ್ದೇನೆ ಎಂದು ಸುಳಿವು ನೀಡಿದ್ದಾರೆ.


 


ಝೀನತ್ ಅಮನ್ ಅವರು ಫಿನ್‌ಟೆಕ್ ಬ್ರ್ಯಾಂಡ್‌ನ ಜಾಹೀರಾತಿನಲ್ಲಿ ಬಣ್ಣ ಹಚ್ಚಿರುವ ಹಿನ್ನೆಲೆಯಲ್ಲಿ ಅದಿತಿ ಎಂಬವರು ಪ್ರತಿಕ್ರಿಯಿಸಿ, “ಝೀನತ್ ಅಮಾನ್ ಕೂಡ ಕಮ್‌ ಬ್ಯಾಕ್ ಮಾಡಿದ್ದಾರೆ, ಇಮ್ರಾನ್ ಖಾನ್ ಕೂಡ ಯಾವಾಗ‌ ಕಮ್‌ ಬ್ಯಾಕ್ ಮಾಡುತ್ತಾರೆ”‌ ಎಂದು ಬರೆದಿದ್ದಾರೆ. ಕಮೆಂಟ್‌ಗೆ ಪ್ರತ್ಯುತ್ತರ ನೀಡಿದ ಇಮ್ರಾನ್ ಖಾನ್, "ಚಲೋ ಅದಿತಿ, ಇದನ್ನು ಇಂಟರ್ನೆಟ್‌ಗೆ ಬಿಡೋಣ... 1 ಮಿಲಿಯನ್ ಲೈಕ್‌ಗಳು ಬಂದರೆ ನಾನು ಕಮ್‌ ಬ್ಯಾಕ್ ಮಾಡುತ್ತೇನೆ “‌ ಎಂದು ಪ್ರತಿಕ್ರಿಯಿಸಿದ್ದಾರೆ.

ಇಮ್ರಾನ್‌ ಖಾನ್ ಅಭಿಮಾನಿಗಳು‌ ಹೇಗಾದರೂ ಒಂದು ಮಿಲಿಯನ್ ಗುರಿಯನ್ನು ತಲುಪಲು ಝೀನತ್‌ ಅವರ ಪೋಸ್ಟ್‌ ಹುಡುಕಿ ಬಂದು ಲೈಕ್‌ ಒತ್ತುತ್ತಿದ್ದಾರೆ. ಒಂದು ಮಿಲಿಯನ್‌ ಲೈಕ್‌ ಬಾರದಿದ್ದರೂ ಬಾಲಿವುಡ್‌ ಗೆ ಮರಳಿ ಬನ್ನಿ ಎಂದು ಹಲವು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News