ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ ಸಿನೆಮಾಗೆ ಉತ್ತಮ ಆರಂಭ; ಭಾರತದಲ್ಲಿ ಮೊದಲ ದಿನವೇ ಸುಮಾರು 140,000 ಟಿಕೆಟುಗಳ ಮಾರಾಟ

Update: 2026-07-17 19:27 IST

Photo Credit : X

ಸಿನಿಮಾದ ರಿಕ್ಲೈನರ್ ಸೀಟುಗಳ ಬೆಲೆ 2,100ರಿಂದ 2500 ರೂ. ನಡುವೆ ಮುಂಗಡ ಬುಕಿಂಗ್ನಲ್ಲಿ ಮಾರಾಟವಾಗುತ್ತಿದ್ದ ಬಗ್ಗೆ ವರದಿಯಾಗಿವೆ.

ಜಾಗತಿಕವಾಗಿ ಬಹಳ ಉತ್ತಮ ವಿಮರ್ಶೆ ಪಡೆದುಕೊಂಡಿರುವ ಕ್ರಿಸ್ಟೋಫರ್ ನೋಲನ್ ಅವರ ಪೌರಾಣಿಕ ಸಿನಿಮಾ ‘ದಿ ಒಡಿಸ್ಸಿ’ ಮೊದಲ ದಿನವೇ ಉತ್ತಮ ಆದಾಯ ಗಳಿಸಿದೆ.

ಪಿವಿಆರ್, ಐನಾಕ್ಸ್ ಮತ್ತು ಸಿನೆಪೊಲಿಸ್ನಲ್ಲಿ ಮೊದಲ ದಿನಕ್ಕೆ ಸುಮಾರು 140,000 ಟಿಕೆಟುಗಳು ಮುಂಗಡ ಬುಕ್ ಆಗಿವೆ. ಆದರೆ ನೋಲನ್ ಅವರ ‘ಓಪನ್ಹೈಮರ್’ಗೆ ಹೋಲಿಸಿದರೆ ಭಾರತದಲ್ಲಿ ಮೊದಲ ದಿನದ ಬುಕಿಂಗ್ನಲ್ಲಿ ಹಿಂದಿದೆ. ಸಿಲಿಯನ್ ಮರ್ಫಿ ನಟಿಸಿದ್ದ ಆ ಸಿನಿಮಾ ಪಿವಿಆರ್, ಐನಾಕ್ಸ್ ಮತ್ತು ಸಿನೆಪೊಲಿಸ್ನಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಟಿಕೆಟ್ಗಳ ಬುಕಿಂಗ್ ಆಗಿತ್ತು

ದಿ ಒಡಿಸ್ಸಿಯ ಹೆಚ್ಚಿನ ಟಿಕೆಟ್ ಬೆಲೆಯೂ ಮುಂಗಡ ಬುಕಿಂಗ್ ಕಡಿಮೆಯಾಗಲು ಕಾರಣವಿರಬಹುದು. ಆದರೆ ಒಟ್ಟು ಆದಾಯ ಸಂಗ್ರಹದಲ್ಲಿ ‘ದಿ ಒಡಿಸ್ಸಿ’ ಮುನ್ನಡೆ ಸಾಧಿಸಿದೆ. ‘ಓಪನ್ಹೈಮರ್’ನ ಮೊದಲ ದಿನದ 7.50 ಕೋಟಿ ರೂ. ಮುಂಗಡ ಬುಕಿಂಗ್ ಆದಾಯಕ್ಕೆ ಹೋಲಿಸಿದರೆ ಟಾಮ್ ಹಾಲಂಡ್ ಮತ್ತು ಮಟ್ ಡ್ಯಾಮನ್ ಅಭಿನಯದ ಈ ಸಿನಿಮಾವು 7.75 ಕೋಟಿ ರೂ. ಗಳಿಸಿದೆ.

Full Viewವಿಶೇಷ ಪ್ರೀಮಿಯರ್ನಿಂದ ಬಂದ ಉತ್ತಮ ವಿಮರ್ಶೆಗಳ ಕಾರಣ ಸಿನಿಮಾವು ಕಳೆದ ಎರಡು ದಿನಗಳಲ್ಲಿ ಭಾರೀ ಚರ್ಚೆಗೆ ಒಳಗಾಗಿದೆ. ಅದೇ ಕಾರಣದಿಂದ ‘ಓಪನ್ಹೈಮರ್’ಗೆ ಹೋಲಿಸಿದರೆ ಉತ್ತಮ ಮುಂಗಡ ಬುಕಿಂಗ್ ಆದಾಯ ಗಳಿಸಿದೆ.

ಓಪನ್ಹೈಮರ್ ಮೊದಲದಿನದಲ್ಲಿ ಒಟ್ಟು ಆದಾಯವಾಗಿ 17.77 ಕೋಟಿ (ರೂ. 14.58 ಕೋಟಿ ನಿವ್ವಳ) ಗಳಿಸಿತ್ತು. ಇದೀಗ ಒಡಿಸ್ಸಿ 20 ಕೋಟಿ ರೂ. ಮೀರಿದ ಗಳಿಕೆಯನ್ನು ದಾಖಲಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಸಿನಿಮಾಗೆ ಜನರ ನಡುವೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದಲ್ಲಿ ಭಾರತದಲ್ಲಿ ಚೆನ್ನಾಗಿ ಗಳಿಕೆ ಮಾಡುವ ನಿರೀಕ್ಷೆಯಿದೆ.

‘ದಿ ಒಡಿಸ್ಸಿ’ ಎನ್ನುವುದು ಪ್ರಾಚೀನ ಗ್ರೀಕ್ ಕವಿ ಹೋಮರ್ ರಚಿಸಿದ ವಿಶ್ವಪ್ರಸಿದ್ಧ ಮಹಾಕಾವ್ಯವಾಗಿದೆ. ಟ್ರೋಜನ್ ಯುದ್ಧದ ನಂತರ ಒಡಿಸ್ಸಿಯನ್ ಎಂಬ ರಾಜನು ಇಥಾಕಾಗೆ ಮರಳಲುಪಡುವ ಕಷ್ಟಗಳು ಮತ್ತು ಸಾಹಸಗಳನ್ನು ಸಿನಿಮಾದಲ್ಲಿ ಚಿತ್ರಿಸಲಾಗಿದೆ.

ಹಾಲಿವುಡ್ ದಿಗ್ಗಜ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಭಾರತದಲ್ಲಿ ವಿಶೇಷ ಪ್ರೀಮಿಯರ್ ಪ್ರದರ್ಶನ ಮಾಡಿದ ನಂತರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜುಲೈ 10ರಂದು ಮುಂಬೈಗೆ ಆಗಮಿಸಿದ್ದ ಸಿನಿಮಾ ತಂಡ ಪ್ರೀಮಿಯರ್ ಪ್ರದರ್ಶನದಲ್ಲಿ ಭಾಗವಹಿಸಿತ್ತು. ಭಾರತದಲ್ಲಿ ಇದೇ ಮೊದಲ ಬಾರಿಗೆ ಕ್ರಿಸ್ಟೋಫರ್ ನೋಲನ್ ಅವರ ಸಿನಿಮಾವೊಂದು ಪ್ರೀಮಿಯರ್ ಪ್ರದರ್ಶನ ಕಂಡಿದೆ.

ಇಂದು ಚಿತ್ರ ಬಿಡುಗಡೆಯಾಗಿದೆ. ಆದರೆ ಟಿಕೆಟ್ ಬೆಲೆ ದೊಡ್ಡ ನಗರಗಳಲ್ಲಿ ದುಬಾರಿಯಾಗಿದೆ ಎನ್ನುವ ಕುರಿತೂ ಚರ್ಚೆಗೆ ಒಳಗಾಗಿದೆ. ಈ ಸಿನಿಮಾದ ರಿಕ್ಲೈನರ್ ಸೀಟುಗಳ ಬೆಲೆ 2,100ರಿಂದ 2500 ರೂ. ನಡುವೆ ಮುಂಗಡ ಬುಕಿಂಗ್ನಲ್ಲಿ ಮಾರಾಟವಾಗುತ್ತಿದ್ದ ಬಗ್ಗೆ ವರದಿಯಾಗಿವೆ.

ಮಾಹಿತಿ ಕೃಪೆ: pinkvilla.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News