×
Ad

69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಕನ್ನಡದ ಅತ್ಯುತ್ತಮ ಚಿತ್ರವಾಗಿ 'ಚಾರ್ಲಿ 777' ಆಯ್ಕೆ

Update: 2023-08-24 18:21 IST

Photo: Twitter

ಹೊಸದಿಲ್ಲಿ: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗುರುವಾರ ಪ್ರಕಟವಾಗಿದ್ದು, ಆರ್. ಮಾಧವನ್ ನಿರ್ದೇಶನದ ಬಾಲಿವುಡ್ ಚಿತ್ರ ‘ರೋಕೆಟರಿ: ದಿ ನಂಬಿ ಎಫೆಕ್ಟ್’ ಗೆ ಅತ್ಯುತ್ತಮ ಕಥಾ ಚಿತ್ರ ಪ್ರಶಸ್ತಿ ದೊರಕಿದೆ.

ಹೊಸದಿಲ್ಲಿಯ ನ್ಯಾಶನಲ್ ಮೀಡಿಯಾ ಸೆಂಟರ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ 69ನೇ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದ್ದು, 2021ರಲ್ಲಿ ಬಿಡುಗಡೆಯಾದ ಅಥವಾ ಸೆನ್ಸಾರ್ ಆದ ಸಿನಿಮಾಗಳಲ್ಲಿ ಅತ್ಯುತ್ತಮ ಸಿನೆಮಾ, ನಟ-ನಟಿ ಹಾಗೂ ತಂತ್ರಜ್ಞರನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಸಿಂಹಪಾಲನ್ನು ‘ಸರ್ದಾರ್ ಉಧಮ್’, ‘RRR’ ಹಾಗೂ ‘ಗಂಗೂಬಾಯಿ ಕಾಥಿಯಾವಾಡಿ’ ಚಿತ್ರಗಳು ಪಡೆದುಕೊಂಡಿವೆ.

ಕನ್ನಡ ಭಾಷಾ ವಿಭಾಗದಲ್ಲಿ ನಟ ರಕ್ಷಿತ್ ಶೆಟ್ಟಿ ಅಭಿನಯದ ಹಾಗೂ ಕಿರಣ್ ರಾಜ್ ನಿದೇಶನದ ‘ಚಾರ್ಲಿ 777’ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಕಥಾ ಚಿತ್ರವಲ್ಲದ ವಿಶೇಷ ಉಲ್ಲೇಖಿತ ವಿಭಾಗದಲ್ಲಿ ಅನಿರುದ್ಧ ಜಟ್ಕರ್ ಅವರ ಕನ್ನಡ ಚಿತ್ರ ‘ಬಾಳೇ ಬಂಗಾರ’ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.

‘ಪುಷ್ಪ: ದಿ ರೈಸ್’ ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್ ಗೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ. ‘ಗಂಗೂಬಾಯಿ ಕಾಥಿಯಾವಾಡಿ’ ಚಿತ್ರದ ನಟನೆಗಾಗಿ ಆಲಿಯಾ ಭಟ್ ಹಾಗೂ ‘ಮಿಮಿ’ ಚಿತ್ರದ ನಟನೆಗಾಗಿ ಕೃತಿ ಸನೋನ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿದೆ.

ರಾಷ್ಟ್ರೀಯ ಏಕತೆ ಕುರಿತ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ‘ದಿ ಕಾಶ್ಮೀರ್ ಫೈಲ್ಸ್’ಗೆ ದೊರಕಿದೆ. ‘‘RRR’’ ಸಂಪೂರ್ಣ ಮನರಂಜನೆ ನೀಡಿದ ಅತ್ಯುತ್ತಮ ಜನಪ್ರಿಯ ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ.

‘RRR’ ಅತ್ಯುತ್ತಮ ಸಾಹಸ ನಿರ್ದೇಶನ, ಅತ್ಯುತ್ತಮ ಛಾಯಾಗ್ರಹಣ ಹಾಗೂ ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ಗೆ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ‘ಗಂಗೂಬಾಯಿ ಕಾಥಿಯಾವಾಡಿ’ ಚಿತ್ರದ ಸಂಕಲನಕ್ಕಾಗಿ ಸಂಜಯ್ ಲೀಲಾ ಬನ್ಸಾಲಿ ಅವರು ಅತ್ಯುತ್ತಮ ಸಂಕಲನ ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ ಹಾಗೂ ‘ಮಿಮಿ’ ಚಿತ್ರದ ನಟನೆಗಾಗಿ ಪಲ್ಲವಿ ಜೋಷಿ ಹಾಗೂ ಪಂಕಜ್ ತ್ರಿಪಾಠಿ ಕ್ರಮವಾಗಿ ಅತ್ಯುತ್ತಮ ಪೋಷಕ ನಟಿ ಹಾಗೂ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘ಶೇರ್ಶಾಹ್’ ವಿಶೇಷ ಜ್ಯೂರಿ ಪ್ರಶಸ್ತಿ ಪಡೆದುಕೊಂಡಿದೆ.

RRR ಹಾಗೂ ಪುಷ್ಪ ಸೇರಿದಂತೆ ತೆಲುಗು ಭಾಷಾ ಚಿತ್ರಗಳು ಒಟ್ಟು 10 ಪ್ರಶಸ್ತಿಯನ್ನು ಗೆದ್ದಿವೆ.

ಒಟ್ಟು 28 ಭಾಷೆಗಳ 280 ಕಥಾ ಚಿತ್ರಗಳು ಹಾಗೂ 23 ಭಾಷೆಗಳ 158 ಕಥಾಚಿತ್ರವಲ್ಲದ ಚಲನಚಿತ್ರಗಳು ಆಯ್ಕೆಯಾಗಿವೆ ಎಂದು ಮಾಹಿತಿ ಹಾಗೂ ಪ್ರಸಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ನೀರಜ್ ಶೇಖರ್ ಮಾಧ್ಯಮಕ್ಕೆ ತಿಳಿಸಿದರು. ಚಲನಚಿತ್ರ ನಿರ್ದೇಶಕ ಕೇತನ್ ಮೆಹ್ತಾ ಪ್ರಶಸ್ತಿ ಘೋಷಿಸಿದರು.

ಪ್ರಶಸ್ತಿ ವಿಜೇತರ ಪಟ್ಟಿ

ಅತ್ಯುತ್ತಮ ಕಥಾ ಚಿತ್ರ ► ರಾಕೇಟರಿ: ದಿ ನಂಬಿ ಎಫೆಕ್ಟ್

ರಾಷ್ಟ್ರೀಯ ಏಕತೆ ಕುರಿತ ಅತ್ಯುತ್ತಮ ಚಿತ್ರಕ್ಕಿರುವ ನಗ್ರೀಸ್ ದತ್ತ್ ಪ್ರಶಸ್ತಿ ► ‘‘ದಿ ಕಾಶ್ಮೀರ್ ಫೈಲ್ಸ್’’

ಸಂಪೂರ್ಣ ಮನರಂಜನೆ ನೀಡಿದ ಅತ್ಯುತ್ತಮ ಜನಪ್ರಿಯ ಚಿತ್ರ ► RRR

ಅತ್ಯುತ್ತಮ ನಟಿ ► ಆಲಿಯಾ ಭಟ್ (ಗಂಗೂಬಾಯಿ ಕಾಥಿಯಾವಾಡಿ), ಕೃತಿ ಸನೋನ್ (ಮಿಮಿ)

ಅತ್ಯುತ್ತಮ ನಟ ► ಅಲ್ಲು ಅರ್ಜುನ್ (ಪುಷ್ಪ)

ಅತ್ಯುತ್ತಮ ಪೋಷಕ ನಟ, ನಟಿ ► ಪಲ್ಲವಿ ಜೋಷಿ (ಕಾಶ್ಮೀರ್ ಫೈಲ್ಸ್), ಪಂಕಜ್ ತ್ರಿಪಾಠಿ (ಮಿಮಿ)

ಅತ್ಯುತ್ತಮ ಸಂಕಲನ ► ಸಂಜಯ್ ಲೀಲಾ ಬನ್ಸಾಲಿ (ಗಂಗೂಬಾಯಿ ಕಾಥಿಯಾವಾಡಿ)

ಅತ್ಯುತ್ತಮ ಸಂಗೀತ ನಿರ್ದೇಶಕ ► ದೇವಿ ಶ್ರೀ ಪ್ರಸಾದ್ (ಪುಷ್ಪಾ)

RRR ಗೆ 3 ಪ್ರಶಸ್ತಿಗಳು : ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಕೊರಿಯೊಗ್ರಫಿ, ಅತ್ಯುತ್ತಮ ಸ್ಪೆಷಲ್ ಎಫೆಕ್ಟ್

ಅತ್ಯುತ್ತಮ ನಾನ್ ಫೀಚರ್ ಚಿತ್ರ ► ಗಢವಾಲಿ

ಅತ್ಯುತ್ತಮ ಹಿಂದಿ ಭಾಷಾ ಚಿತ್ರ ► ಎಕ್ ಥಾ ಗಾಂವ್

ಅತ್ಯುತ್ತಮ ಹಿಂದಿ ಚಿತ್ರ ► ಸರ್ದಾರ್ ಉಧಾಮ್

ಅತ್ಯುತ್ತಮ ಗುಜರಾತಿ ಚಿತ್ರ ► ಚೆಲ್ಲೊ ಶೋ

ಅತ್ಯುತ್ತಮ ಕನ್ನಡ ಚಿತ್ರ ► ಚಾರ್ಲಿ 777

ಅತ್ಯುತ್ಯುಮ ಮೈಸಿಂಗ್ ಚಿತ್ರ ► ಬೂಂಬಾ ರೈಡ್

ಅತ್ಯುತ್ತಮ ಅಸ್ಸಾಮಿ ಚಿತ್ರ ► ಅನುರ್

ಅತ್ಯುತ್ತಮ ಬಂಗಾಳಿ ಚಿತ್ರ ► ಕಲ್ಕೊಖ್ಖೊ

ಅತ್ಯುತ್ತಮ ಮೈಥಿಲಿ ಚಿತ್ರ ► ಸಮಾನಂತರ್

ಅತ್ಯುತ್ತಮ ಮರಾಠಿ ಚಿತ್ರ ► ಏಕ್ದಾ ಕಾಯ್ ಝಲಾ

ಅತ್ಯುತ್ತಮ ಮಲಯಾಳಂ ಚಿತ್ರ ► ಹೋಮ್

ಸಾಮಾಜಿಕ ಸಮಸ್ಯೆಗಳ ಕುರಿತ ಅತ್ಯುತ್ತಮ ಚಿತ್ರ ಅನುನಾದ್-ದಿ ರಿಸೋನೆನ್ಸ್

ಪರಿಸರ ಸಂರಕ್ಷಣೆಯ ಕುರಿತ ಅತ್ಯುತ್ತಮ ಚಿತ್ರ ► ಅವಸವ್ಯೆಹಂ (ಮಲಯಾಳಂ)

ಅತ್ಯುತ್ತಮ ಮಕ್ಕಳ ಚಿತ್ರ ► ಗಾಂಧಿ ಆ್ಯಂಡ್ ಕೊ. (ಗುಜರಾತಿ)

ಅತ್ಯುತ್ತಮ ನಿರ್ದೇಶನ ► ಗೋದಾವರಿ (ದಿ ಹೋಲಿ ವಾಟರ್ )

ಅತ್ಯುತ್ತಮ ಚಿತ್ರಕಥೆ ► ನಾಯಾಟ್ಟು (ದಿ ಹಂಟ್) (ಮಲಯಾಳಂ)

ಅತ್ಯುತ್ತಮ ಶಬ್ದಗ್ರಹಣ ► ಚವಿಟ್ಟು (ಮಲೆಯಾಳಂ)

ಅತ್ಯುತ್ತಮ ಪ್ರಸಾಧನ ►ಗಂಗೂಬಾಯಿ ಕಾಥಿಯಾವಾಡಿ (ಹಿಂದಿ)

ಅತ್ಯುತ್ತಮ ಸಂಗೀತ ನಿರ್ದೇಶನ ► ಪುಷ್ಪ (ದಿ ರೈಸ್ ಪಾರ್ಟ್-1)

ಅತ್ಯುತ್ತಮ ಸಾಹಿತ್ಯ ► ಕೊಂಡಾ ಪೋಲಂ (ತೆಲುಗು)

ವಿಶೇಷ ಜ್ಯೂರಿ ಪ್ರಶಸ್ತಿ ► ಶೇರ್ಶಾಹ್ 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News