×
Ad

200 ಕೋಟಿ ಕ್ಲಬ್ ಗೆ ಲಗ್ಗೆ ಇಟ್ಟ ʼಪೆದ್ದಿʼ; ರಾಮ್ ಚರಣ್ ವೃತ್ತಿಜೀವನದ ಅತಿ ದೊಡ್ಡ ಸೋಲೋ ಹಿಟ್!

Update: 2026-06-08 18:39 IST

‘ರಂಗಸ್ಥಲಂ’ ಸಿನಿಮಾದ ದಾಖಲೆ ಮುರಿದ ‘ಪೆದ್ದಿ’ ರಾಮ್ ಚರಣ್ ಅವರ ವೃತ್ತಿ ಜೀವನದ ಅತಿ ದೊಡ್ಡ ಆದಾಯ ಗಳಿಸಿದ ಸೋಲೋ ಸಿನಿಮಾವಾಗಿದೆ.

ಖ್ಯಾತ ತೆಲುಗು ನಟ ರಾಮ್ ಚರಣ್ ಅವರ ‘ಪೆದ್ದಿ’ ಚಿತ್ರ ವಿಶ್ವಾದ್ಯಂತ 233 ಕೋಟಿ ರೂ.ಗಳನ್ನು ಗಳಿಸಿದ್ದು, ಅಧಿಕೃತವಾಗಿ ‘ರಂಗಸ್ಥಲಂ’ ಸಿನಿಮಾವನ್ನು ಹಿಂದಿಕ್ಕಿ ಅವರ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಸೂಪರ್ ಹಿಟ್ ಚಿತ್ರವಾಗಿದೆ.

ಬುಚಿ ಬಾಬು ಸನಾ ನಿರ್ದೇಶನದ ಸಿನಿಮಾದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿದ್ದಾರೆ. ಈ ಕ್ರೀಡೆಗೆ ಸಂಬಂಧಿಸಿದ ಕತೆ ಇರುವ ಸಿನಿಮಾ ಭಾರತದಲ್ಲಿ ಮೂರು ದಿನಗಳಲ್ಲಿ 157.15 ಕೋಟಿ ರೂ.ಗಳನ್ನು ಗಳಿಸಿದೆ ಎಂದು ಸಕ್ಕಿಲ್ಸ್ ಅವರ ಬಾಕ್ಸ್ ಆಫೀಸ್ ಅಂಕಿಅಂಶಗಳು ತಿಳಿಸಿವೆ.

ಸುಮಾರು 216 ಕೋಟಿ ರೂ. ಗಳಿಸಿದ್ದ ‘ರಂಗಸ್ಥಲಂ’ ರಾಮ್ ಚರಣ್ ಅವರು ಒಬ್ಬರೇ ನಾಯಕನಾಗಿರುವಾಗ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿತ್ತು. ಇದೀಗ ‘ಪೆದ್ದಿ’ ಜಾಗತಿಕವಾಗಿ 200 ಕೋಟಿ ರೂ. ಗಡಿ ದಾಟಿ ದಾಖಲೆ ಮಾಡಿದೆ. ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿರದೆ, ತೆಲುಗು ಸಿನಿಮಾವಾಗಿ ಇತರ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗಿತ್ತು.

‘ಪೆದ್ದಿ’ ಸಿನಿಮಾ ನಾಲ್ಕು ದಿನಗಳ ಆರಂಭಿಕ ವಾರಾಂತ್ಯದಲ್ಲಿ ಅಸಾಧಾರಣ ಪ್ರದರ್ಶನ ನೀಡಿದೆ. ಈ ಸಿನಿಮಾವು 4ನೇ ದಿನದಂದು ದೇಶೀಯ ಮಟ್ಟದಲ್ಲಿ ನಿವ್ವಳ ಗಳಿಕೆಯಲ್ಲಿ ಗಮನಾರ್ಹವಾದ ಶೇ 10.6 ಬೆಳವಣಿಗೆ ಸಾಧಿಸಿದೆ. 3ನೇ ದಿನದ 9,068 ಪ್ರದರ್ಶನಗಳಿಂದ 28.85 ಕೋಟಿ ರೂ.ಗಳಿಂದ ನಾಲ್ಕನೇ ದಿನಕ್ಕಾಗುವಾಗ 31.90 ಕೋಟಿ ರೂ.ಗಳಿಗೆ ಏರಿಕೆಯಾಯಿತು.

ದೀಗ ದೇಶದೊಳಗೆ ಒಟ್ಟು 187.02 ಕೋಟಿ ರೂ. ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಂದ ಒಟ್ಟು 46 ಕೋಟಿ ರೂ. ಗಳಿಕೆ ಮಾಡಿ ಜಾಗತಿಕವಾಗಿ ಒಟ್ಟು 233 ಕೋಟಿ ರೂ. ಗಳಷ್ಟು ಗಳಿಕೆಗೆ ಕಾರಣವಾಗಿದೆ.

ರಾಮ್ ಚರಣ್ ಅವರ ‘RRR’ ಸೂಪರ್ ಹಿಟ್ ಆಗಿದ್ದರೂ, ಜ್ಯೂನಿಯರ್ ಎನ್ಟಿಆರ್ ಜೊತೆಗೆ ಅವರು ಪರದೆ ಹಂಚಿಕೊಂಡಿದ್ದರು, ಇದೀಗ ‘ಪೆದ್ದಿ’ಯಲ್ಲಿ ಅವರು ಒಬ್ಬರೇ ನಾಯಕರಾಗಿದ್ದಾರೆ. ಹೀಗಾಗಿ ನಾಲ್ಕನೇ ದಿನದಂದು ಶೇ 41.5 ರಷ್ಟು ಪ್ರೇಕ್ಷಕರನ್ನು ಆಕರ್ಷಿಸಿರುವುದು ಉತ್ತಮ ಗಳಿಕೆ ಎಂದು ನಂಬಲಾಗುತ್ತದೆ.

ಆದರೆ ಸೋಮವಾರದ ಗಳಿಕೆ ‘ಪೆದ್ದಿ’ಗೆ ಅತಿ ಮುಖ್ಯವಾಗುತ್ತದೆ. ಸೂರ್ಯ ಅವರ ‘ಕರುಪ್ಪು’ ಮತ್ತು ಅರ್ಜುನ್ ಸರ್ಜಾ ಅವರ ಮಧ್ಯಮ ಗಳಿಕೆ ಕಂಡ ‘ಬ್ಲಾಸ್ಟ್’ ಹೊರತುಪಡಿಸಿ ಇತ್ತೀಚೆಗೆ ಬಿಡುಗಡೆ ಕಂಡ ಅನೇಕ ಸಿನಿಮಾಗಳು ವಾರಾಂತ್ಯದ ಗಳಿಕೆಯ ನಂತರ ಕುಸಿತವನ್ನು ಕಂಡಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News