×
Ad

ಬೆಂಜನಪದವು: ದ್ವಿಚಕ್ರ ವಾಹನಗಳ ಮೇಲೆ ಹರಿದ ಮಣ್ಣು ಸಾಗಾಟದ ಲಾರಿ

Update: 2024-03-24 11:24 IST

ಬಂಟ್ವಾಳ : ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಎರಡು ದ್ವಿಚಕ್ರ ವಾಹನಗಳ ಮೇಲೆ ಘನ ಗಾತ್ರದ ಲಾರಿಯೊಂದು ಹರಿದು ಬೈಕಗಳು ಅಪ್ಪಚ್ಚಿಯಾದ ಘಟನೆ ಬೆಂಜನಪದವು ಸಮೀಪದ ಕೊಡ್ಮಾನ್ ಕೋಡಿ ಎಂಬಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ತಮಿಳುನಾಡು ಮೂಲದ ಬೃಹತ್ ಗಾತ್ರದ ಲಾರಿ ಮಣ್ಣು ತುಂಬಿಸಿಕೊಂಡು ಬೆಂಜನಪದವು ಕಡೆಯಿಂದ ಬಿಸಿರೋಡಿನ ಕೈಕಂಬ ರಸ್ತೆಗೆ ತೆರಳಬೇಕಿತ್ತು. ಆದರೆ ಚಾಲಕ ದಾರಿ ತಪ್ಪಿ ಮಾರಿಪಳ್ಳ ರಸ್ತೆಯಲ್ಲಿ ಸಾಗಿದ್ದಾನೆ ಎನ್ನಲಾಗಿದೆ.

ಈ ವೇಳೆ ತಿರುವಿನಲ್ಲಿ ಅಧಿಕ ಲೋಡ್ ಹೊಂದಿದ ಕಾರಣ ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿ, ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಎರಡು ಬೈಕ್ ಗಳ ಮೇಲೆ ಸಾಗಿದೆ. ಎರಡೂ ಬೈಕ್‌ ಗಳು ಸಂಪೂರ್ಣ ಹುಡಿಯಾಗಿವೆ ಎಂದು ತಿಳಿದು ಬಂದಿದೆ.

 ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News