ಮಂಗಳೂರು: ಮಧ್ಯ ಪ್ರಾಥಮಿಕ, ಅಳಿಯೂರು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಜು.24ರಂದು ರಜೆ
Update: 2023-07-24 09:24 IST
ಮಂಗಳೂರು, ಜು.24: ಶಾಲೆಯ ರಸ್ತೆಯಲ್ಲಿ ಮರ ಬಿದ್ದ ಹಾಗೂ ನದಿಯಲ್ಲಿ ನೀರಿನ ಮಟ್ಟ ಏರಿ ಸಂಚಾರ ಅಸಾಧ್ಯವಾದ ಕಾರಣ ಮಕ್ಕಳ ಸುರಕ್ಷತೆಯ ಹಿನ್ನೆಲೆಯಲ್ಲಿ ಮಂಗಳೂರು ತಹಶೀಲ್ದಾರ್ ಅವರ ಅನುಮತಿ ಮೇರೆಗೆ ಮಧ್ಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ (ಮಂಗಳೂರು ಉತ್ತರ) ಜು.24ರಂದು ರಜೆ ಸಾರಲಾಗಿದೆ.
ಅಳಿಯೂರು ಪ್ರಾಥಮಿಕ ಶಾಲೆ ಮತ್ತು ಅಳಿಯೂರು ಪ್ರೌಢ ಶಾಲೆಗಳಿಗೂ ಇಂದು (ಜು.24ರಂದು) ಮಳೆ ಕಾರಣ ರಜೆ ಘೋಷಿಸಲಾಗಿದೆ. ಈ ದಿನದ ರಜೆಯನ್ನು ಮುಂದಿನ 2 ಶನಿವಾರಗಳಂದು ತರಗತಿ ನಡೆಸಿ ಮರುಹೊಂದಿಸಲು ಸೂಚಿಸಲಾಗಿದೆ.