×
Ad

ಮಂಗಳೂರು: ಎಕ್ಸ್‌ಪರ್ಟೈಸ್ ಟ್ರೈನಿಂಗ್ ಸಂಸ್ಥೆಯಲ್ಲಿ ಏಳು ಹೊಸ ಕೋರ್ಸ್‌ಗಳಿಗೆ ಚಾಲನೆ

Update: 2024-08-19 17:28 IST

ಮಂಗಳೂರು: ನಗರದ ಕೊಟ್ಟಾರ ಚೌಕಿಯ ಕರ್ನಿರೆ ಟವರ್‌ನಲ್ಲಿ ಪುನರ್ ಆರಂಭಗೊಂಡ ಎಕ್ಸ್‌ಪರ್ಟೈಸ್ ಟ್ರೈನಿಂಗ್ ಸಂಸ್ಥೆಯಲ್ಲಿ ಏಳು ಹೊಸ ಕೋರ್ಸ್‌ಗಳಿಗೆ ಸೋಮವಾರ ಚಾಲನೆ ನೀಡಲಾಯಿತು. ಇದು ನ್ಯಾಷನಲ್ ಎಕ್ಸ್ಯಾಮಿನೇಶನ್ ಬೋರ್ಡ್ ಇನ್ ಒಕ್ಯುಪೇಶನಲ್ ಸೇಫ್ಟಿ ಅಂಡ್ ಹೆಲ್ತ್ ( NEBOSH ) ಮಾನ್ಯತೆ ಪಡೆದ ಮಂಗಳೂರಿನ ಏಕೈಕ ತರಬೇತಿ ಕೇಂದ್ರವಾಗಿದೆ.


ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸ್‌ಪರ್ಟೈಸ್ ಟ್ರೈನಿಂಗ್ ಸಂಸ್ಥೆಯ ನಿರ್ದೇಶಕ ಮತ್ತು ಎಕ್ಸ್‌ಪರ್ಟೈಸ್ ಕಂಟ್ರಾಕ್ಟಿಂಗ್ ಕಂಪೆನಿ ಕೆಎಸ್‌ಎ ಇದರ ಉಪಾಧ್ಯಕ್ಷ ಕೆ ಎಸ್ ಶೇಖ್ ಕರ್ನಿರೆ ಅವರು ವಿದೇಶದಲ್ಲಿ ಅದರಲ್ಲೂ ಗಲ್ಫ್‌ನಲ್ಲಿ ತೈಲ ಮತ್ತು ಗ್ಯಾಸ್ ಉದ್ಯಮದಲ್ಲಿ ಉದ್ಯೋಗ ಬಯಸುವವರಿಗೆ ಸುಧಾರಿತ ತಾಂತ್ರಿಕ ತರಬೇತಿ ನೀಡುವ ಕೋರ್ಸ್‌ಗಳನ್ನು ಇಲ್ಲಿ ಆರಂಭಿಸಲಾಗಿದೆ. ಇಲ್ಲಿ ಅತ್ಯುತ್ತಮ ತರಬೇತಿ ನೀಡಲು ಎಲ್ಲ ವ್ಯವಸ್ಥೆಇದೆ, ಅಗತ್ಯ ಉಪಕರಣಗಳನ್ನು ಅಮೇರಿಕ ಹಾಗು ನೆದರ್ ಲ್ಯಾಂಡ್ ಗಳಿಂದಲೂ ತರಿಸಲಾಗಿದೆ ಎಂದು ಹೇಳಿದರು.

ವಿದೇಶದಲ್ಲಿ ತೈಲ ಮತ್ತು ಗ್ಯಾಸ್ ಉದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ಇದ್ದರೂ, ಮಂಗಳೂರಿನವರಿಗೆ ಉದ್ಯೋಗದ ಅವಕಾಶವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಅವರಿಗೆ ಸೂಕ್ತ ತರಬೇತಿ ನೀಡುವ ಸಂಸ್ಥೆ ಇಲ್ಲಿ ಇಲ್ಲದಿರುವುದು ಇದಕ್ಕೆ ಕಾರಣವಾಗಿದೆ. ಈ ವಿಚಾರವನ್ನು ಮನಗಂಡು ವಿದೇಶದಲ್ಲಿ ಉದ್ಯೋಗ ಪಡೆಯಲು ಸಹಕಾರಿಯಾಗುವ ಕೋರ್ಸ್‌ಗಳನ್ನು ಎಕ್ಸ್‌ಪರ್ಟೈಸ್ ಟ್ರೈನಿಂಗ್ ಸಂಸ್ಥೆಯಲ್ಲಿ ಆರಂಭಿಸಿಲಾಗಿದೆ. ಈ ಸಂಸ್ಥೆಯಲ್ಲಿ ತರಬೇತಿ ಪಡೆದವರಿಗೆ ವಿದೇಶದಲ್ಲಿ ಶೇ 100ರಷ್ಟು ಉದ್ಯೋಗ ಖಚಿತ. ಅಲ್ಲದೆ ವಿದೇಶದಲ್ಲಿರುವ ತಮ್ಮ ಸಂಸ್ಥೆಗಳಲ್ಲಿಯೂ ಉದ್ಯೋಗದ ಅವಕಾಶ ನೀಡುವುದಾಗಿ ಕೆ ಎಸ್ ಶೇಖ್ ಕರ್ನಿರೆ ತಿಳಿಸಿದರು.


ಬೋಲ್ಟ್ ಟಾರ್ಕಿಂಗ್ ಮತ್ತು ಟೆನ್ಷನಿಂಗ್ ಟೆಕ್ನಿಶಿಯನ್, ಉಸಿರಾಟದ ಉಪಕರಣ ತಂತ್ರಜ್ಞ, ಹೈ ಪ್ರೆಶರ್ ವಾಟರ್ ಜೆಟ್ಟಿಂಗ್, ಮೆಕ್ಯಾನಿಕಲ್ ಫಿಟ್ಟರ್, ವರ್ಕ್ ಪರ್ಮಿಟ್ ರಿಸೀವರ್/ ಸ್ಟ್ಯಾಂಡ್‌ಬೈ ಮ್ಯಾನ್, ನೆಬೋಶ್- ಐಜಿಸಿ & ಎಚ್ ಎಸ್ ಡಬ್ಲ್ಯು ಹಾಗು ಡಿಪ್ಲೋಮ ಇನ್ ಆಯಿಲ್ ಅಂಡ್ ಗ್ಯಾಸ್ ಕೋರ್ಸ್‌ಗಳನ್ನು ಆರಂಭಿಸಲಾಗಿದ್ದು, ಒಂದು ಕೋರ್ಸ್‌ನಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿ ಪ್ರಾಕ್ಟೀಕಲ್ ತರಬೇತಿ ನೀಡಲಾಗುವುದು ಮತ್ತು ತರಬೇತಿ ಪಡೆದವರಿಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಇರುವ ಐಕ್ಯೂ -ಒಎಚ್‌ಎಸ್ (ಯುಎಸ್‌ಎ) ಪ್ರಮಾಣ ಪತ್ರ ನೀಡಲಾಗುವುದು ಎಂದು ವಿವರಿಸಿದರು.

ಸಂಸ್ಥೆಯ ತರಬೇತಿ ಮತ್ತು ಅಭಿವೃದ್ಧಿ ವಿಭಾಗದ ಮ್ಯಾನೇಜರ್ ಝಮೀಲ್ ಅಹ್ಮದ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಈಗಾಗಲೇ 800 ಕ್ಕೂ ಹೆಚ್ಚು ಯುವಜನರಿಗೆ ಈ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಿ ವಿವಿಧ ದೇಶಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಲಾಗಿದೆ . ತಾಂತ್ರಿಕ ತರಬೇತಿಯ ಜೊತೆ ಸಂವಹನ ಕಲೆ, ಸಂದರ್ಶನಕ್ಕೆ ತಯಾರಿ , ರೆಸ್ಯುಮ್ ತಯಾರಿಸುವ ಕಲೆಗಳ ಕುರಿತೂ ತರಬೇತಿ ನೀಡಿ ಉದ್ಯೋಗಕ್ಕೆ ಸಿದ್ಧವಾಗಿರುವಂತೆ ಸಜ್ಜುಗೊಳಿಸಲಾಗುತ್ತದೆ ಎಂದು ಎಂದು ಝಮೀಲ್ ವಿವರ ನೀಡಿದರು.


ಎಕ್ಸ್‌ಪರ್ಟೈಸ್ ಕಂಟ್ರಾಕ್ಟಿಂಗ್ ಕಂಪೆನಿ ಕೆಎಸ್‌ಎ ಇದರ ಉಪಾಧ್ಯಕ್ಷ ಕೆ ಎಸ್ ಅಬ್ದುಲ್ ರಹೀಮ್, ಉಪಾಧ್ಯಕ್ಷ ಅಬ್ದುಲ್‌ ರಶೀದ್‌, ಸಿಗ್ನಸ್ ಸೊಲ್ಯೂಷನ್ಸ್ ಸಂಸ್ಥೆಯ ಮ್ಯಾನೇಜಿಂಗ್ ಪಾರ್ಟ್‌ನರ್ ಮುಹಮ್ಮದ್ ಶೌಹಿಲ್, ಸಿಗ್ನಸ್ ಸೊಲ್ಯೂಷನ್ಸ್‌ನ ವ್ಯವಸ್ಥಾಪಕ ಪಾಲುದಾರ ಸರ್ಹಾನ್ ಅಹಮದ್, ಸಿಗ್ನಸ್ ಸೊಲ್ಯೂಷನ್ಸ್‌ನ ಜನರಲ್ ಮ್ಯಾನೇಜರ್‌ ಶೇಖ್ ಮೊಯ್ದಿನ್ , ಸಿಗ್ನಸ್ ಸೊಲ್ಯೂಷನ್ಸ್‌ನ ಫೈನಾನ್ಸ್ ಮ್ಯಾನೇಜರ್ ಮುಹಮ್ಮದ್ ಹನೀಫ್, ಅಕೌಂಟ್ಸ್ ಮ್ಯಾನೇಜರ್ ಗೋವಿಂದ್ ಪ್ರಸಾದ್, ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕರಾದ ಪ್ರಸಾದ್ ವರಕಳ ವಿವಿಧ ಕೋರ್ಸ್‌ಗಳ ಉದ್ಘಾಟನೆ ನೆರವೇರಿಸಿದರು.

ಅನ್ಸಾರ್ ಸೈಯದ್ ತಂಙಳ್, ಇಸ್ಮಾಯೀಲ್ ಉಪಸ್ಥಿತರಿದ್ದರು. ಟೆಕ್ನಿಕಲ್ ಟ್ರೈನರ್ ಜೀತೇಶ್. ಜೆ ವಂದಿಸಿದರು.
























Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News