×
Ad

ಕಿರುಕುಳ ನೀಡಿದ್ದನ್ನು ಪ್ರಶ್ನಿಸಿದಕ್ಕೆ ನನ್ನ ವಿರುದ್ಧ ಸುಳ್ಳು ಕೇಸು: ಅಬ್ದುಲ್ ರವೂಫ್ ಸ್ಪಷ್ಟನೆ

Update: 2025-07-08 20:11 IST

ಮಂಗಳೂರು: ಯುವತಿಯರಿಗೆ ಮದುವೆ ಮಾಡಿಸಲು ಹಣ ನೀಡುವ ನೆಪದಲ್ಲಿ ಕಿರುಕುಳ ನೀಡಿದ್ದನ್ನು ಪ್ರಶ್ನಿಸಿದಕ್ಕೆ ಸಿದ್ದೀಕ್ ಪಾಂಡವರಕಲ್ಲು ಎಂಬವರು ನನ್ನ ವಿರುದ್ಧ ಸುಳ್ಳು ಕೇಸು ದಾಖಲಿಸಿರುವುದಾಗಿ ಮಂಗಳೂರಿನ ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಸಂಸ್ಥೆಯ ಸ್ಥಾಪಕ ಅಬ್ದುಲ್ ರವೂಫ್ ಆರೋಪಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾನು 18 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಯಾರಿಗೂ ಅನ್ಯಾಯ ಮಾಡಿಲ್ಲ. ಸಹಾಯ ಕೇಳಿ ಬಂದವರಿಗೆ ನೆರವಾಗಿದ್ದೇನೆ. ಯಾರಿಗೂ ನಂಬಿಕೆ ದ್ರೋಹ ಮಾಡಿಲ್ಲ ಎಂದು ಹೇಳಿದರು.

ವಾಯ್ಸ್ ಆಫ್ ಬ್ಲಡ್ ಡೋನರ್ನ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಅದರ ಮೂಲಕ ವಿವಿಧ ಪ್ರದೇಶ ಗಳಲ್ಲಿ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ದಾಖಲೆಯ ಮಟ್ಟದಲ್ಲಿ ರಕ್ತದಾನ ಮಾಡಿಸಿದ್ದೇನೆ. ಸಮಾಜಕ್ಕೆ ಉಚಿತ ಆ್ಯಂಬುಲೆನ್ಸ್ ಸೇವೆ ಕಲ್ಪಿಸಿ, ವಿಕಲಚೇತನರಿಗೆ ವೀಲ್ ಚೇರ್ ಮುಂತಾದ ಪರಿಕರಗಳನ್ನು ನೀಡುತ್ತಾ ನಿರಂತರವಾಗಿ ಸಮಾಜ ಸೇವೆ ಮಾಡುತ್ತಾ ಬಂದಿರುವ ನನ್ನೊಂದಿಗೆ ನೂರಾರು ಗಣ್ಯರು, ಯುವಕರು ಕೈಜೋಡಿಸಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಾಯ್ಸ್ ಅಫ್ ವಿಮೆನ್ಸ್ ವಿಂಗ್‌ನ ಅಲಿಷಾ ಅಮೀನ್, ಕ್ಯಾಂಪ್ ಇನ್‌ಚಾರ್ಜ್ ನಝೀರ್ ದೇರಳಕಟ್ಟೆ, ವಕೀಲರಾದ ಇಸ್ಮಾಯೀಲ್ ಶಾಫಿ, ಸದಸ್ಯ ರಂಸಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News