ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ
Update: 2026-02-21 16:51 IST
ಮಂಗಳೂರು : ಹಿರಿಯ ಪತ್ರಕರ್ತ, ಕಬಕ ನಿವಾಸಿ ಸುಂದರ ಕಬಕ (56 ) ಅವರು ಮಂಗಳೂರಿನಲ್ಲಿ ಶನಿವಾರ ಮುಂಜಾನೆ ನಿಧನರಾಗಿದ್ದಾರೆ.
ಚೆನ್ನೈ, ಹೈದರಾಬಾದ್, ಬೆಂಗಳೂರು ಮಹಾನಗರಗಳಲ್ಲಿ ಅವರು ಹಲವು ಟಿವಿ ಚಾನೆಲ್‌ಗಳಲ್ಲಿ ಮುಖ್ಯ ಸಂಪಾದಕೀಯ ಹುದ್ದೆಗಳನ್ನು ನಿರ್ವಹಿಸಿದ್ದರು.
ಅನಾರೋಗ್ಯ ಪೀಡಿತರಾಗಿದ್ದ ಅವರು ಮಂಗಳೂರಿನ ವೈದ್ಯಕೀಯ ಕಾಲೇಜು ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.