ಮುಹಮ್ಮದ್ ಮುಹಿಯುದ್ದೀನ್ ಪಕ್ಕಲಡ್ಕ
Update: 2026-02-24 20:17 IST
ಮಂಗಳೂರು: ಬಜಾಲ್ ಪಕ್ಕಲಡ್ಕ ನಿವಾಸಿ ಮುಹಮ್ಮದ್ ಮುಹಿಯುದ್ದೀನ್(94) ಅಲ್ಪ ಕಾಲದ ಅಸೌಖ್ಯದಿಂದ ತಮ್ಮ ಸ್ವಗೃಹದಲ್ಲಿ ಮಂಗಳವಾರ ನಿಧನರಾದರು.
ಎಂಎಂ ದೀನ್ ಸಾಬ್ ಎಂದೇ ಗುರುತಿಸಿಕೊಂಡಿದ್ದ ಮುಹಮ್ಮದ್ ಮುಹಿಯುದ್ದೀನ್ ಅವರು ಪ್ರಕಾಶ್ ಬೀಡಿ ಕಂಪೆನಿಯಲ್ಲಿ ಮ್ಯಾನೇಜರ್ ಆಗಿ ಸುಮಾರು 4 ದಶಕಗಳ ಸೇವೆ ಸಲ್ಲಿಸಿದ್ದರು. ಮುಹಮ್ಮದ್ ಮುಹಿಯುದ್ದೀನ್ ಅವರು ಪಕ್ಕಲಡ್ಕ ಮುಹಿಯುದ್ದೀನ್ ಜುಮಾ ಮಸ್ಜಿದ್‌ನ ಕಟ್ಟಡ ನವೀಕರಣದ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮದರಸ ಸಮಿತಿಯ ಅಧ್ಯಕ್ಷರಾಗಿದ್ದರು.
ಮೃತರು ಪತ್ನಿ, 2 ಗಂಡು, 4ಹೆಣ್ಣುಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.