ಮುಹಮ್ಮದ್ ಅಲಿ
Update: 2026-02-16 07:19 IST
ಮಂಗಳೂರು: ಮೂಲತಃ ನಗರದ ಜೆಪ್ಪುವಿನ ಪ್ರಸಕ್ತ ಕುತ್ತಾರ್ ಶಾಂತಿಭಾಗ್‌ನಲ್ಲಿ ವಾಸವಾಗಿದ್ದ ಮುಹಮ್ಮದ್ ಅಲಿ ರವಿವಾರ ಸಂಜೆ ನಿಧನರಾದರು.
ಮೃತರು ವಾರ್ತಾಭಾರತಿಯ ಉದ್ಯೋಗಿಯಾಗಿರುವ ಪುತ್ರ ತ್ವಾಹಿರ್ ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ವಿದೇಶದಲ್ಲಿ ಉದ್ಯೋಗಿಯಾಗಿದ್ದ ಅವರು ಕೆಲವು ವರ್ಷಗಳ ಹಿಂದೆ ಊರಿಗೆ ಬಂದು ನೆಲೆಸಿದ್ದರು. ಸೋಮವಾರ ಬೆಳಗ್ಗೆ ಕುತ್ತಾರ್ ಮದನಿನಗರ ಜುಮಾ ಮಸೀದಿಯ ಆವರಣದಲ್ಲಿ ದಫನ ಮಾಡಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.